ಸಂಪುಟ ವಿಸ್ತರಣೆ ಕುರಿತು ದೆಹಲಿಯಲ್ಲಿ ವಿಶೇಷ ಸಭೆ: ಸಭೆ ನಂತರ ದೆಹಲಿಗೆ ಬರುವಂತೆ ಸೂಚನೆ:ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು:

ಬೆಂಗಳೂರು, ಏಪ್ರಿಲ್ 18 ಸಂಪುಟ ವಿಸ್ತರಣೆ ಬಗ್ಗೆ ಭಾ.ಜ.ಪ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ನವದೆಹಲಿಯಲ್ಲಿ ಕರ್ನಾಟಕದ ಬಗ್ಗೆ ವಿಶೇಷ ಸಭೆ ಕರೆಯುವುದಾಗಿ ತಿಳಿಸಿದ್ದಾರೆ. ಸಭೆಯ ನಂತರ ದೆಹಲಿಗೆ ಬರುವಂತೆ ನಡ್ಡಾ ಅವರು ತಮಗೆ ತಿಳಿಸಿದ್ದಾರೆ. ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಬಗ್ಗೆ ಅಲ್ಲಿಯೇ ತೀರ್ಮಾನವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕರ್ನಾಟಕದ ಬಗ್ಗೆ ದೆಹಲಿಯಲ್ಲಿ ಸಭೆ‌ ನಡೆಸುತ್ತೇವೆ. ಸಭೆಯ ನಂತರ ಮಾಹಿತಿ ನೀಡುತ್ತೇನೆ. ಆ ನಂತರ ದೆಹಲಿಗೆ ಬರುವಂತೆ ನಡ್ಡಾ ಅವರು ತಮಗೆ ಹೇಳಿದ್ದಾಗಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.

 ಚೀನಾದ ಶಾಂಘೈನಲ್ಲಿ ಕೊರೊನಾಗೆ ಮೂವರು ಬಲಿ, ಲಾಕ್‌ಡೌನ್‌ ಬಳಿಕ ಮೊದಲ ಸಾವಿನ ವರದಿ

ಹುಬ್ಬಳ್ಳಿ ಘಟನೆಗೆ ಸಂಬಂಧಿಸಿದ ಎಲ್ಲರನ್ನೂ ಬಂಧಿಸಲಾಗಿದೆ. ಅದರ ಹಿಂದಿರುವ ನಾಯಕರ ತನಿಖೆಯಾಗಿ ತಪ್ಪಿತಸ್ಥರ ವಿರುದ್ಧ ಕಾನೂನಿನ ಕ್ರಮ ಜರುಗಿಸಲಾಗುವುದು ಎಂದರು.ಪಿ.ಎಸ್.ಐ ಪರೀಕ್ಷೆಯಲ್ಲಿ ಅಕ್ರಮವಾಗಿರುವ ಕುರಿತು ಗೃಹ ಸಚಿವರ ಗಮನಕ್ಕೆ ಬಂದ ಕೂಡಲೇ ನಿಷ್ಪಕ್ಷಪಾತ ತನಿಖೆಯಾಗಲು ಸಿಐಡಿಗೆ ವಹಿಸಲಾಗಿದೆ. ಪರೀಕ್ಷೆಯಾಗಿರುವ ಕೇಂದ್ರದಲ್ಲಿ ಸಮಸ್ಯೆಯಾಗಿದ್ದರೆ, ಅಧೀಕ್ಷಕರ ಮಟ್ಟದಲ್ಲಿ ಸಮಸ್ಯೆ ಅಥವಾ ಮೇಲಾಧಿಕಾರಿಗಳ ಸಮಸ್ಯೆ ಇದ್ದರೆ ಸಮಗ್ರವಾಗಿ ತನಿಖೆ ಮಾಡಲು ಆದೇಶ ನೀಡಲಾಗಿದೆ.

ಲಖೀಂಪುರ ಖೇರಿ ಗಲಭೆ ಪ್ರಕರಣ: ಆಶಿಶ್‌ ಮಿಶ್ರಾ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಬೇರೆ ಪಕ್ಷದ ಸರ್ಕಾರವಾಗಿದ್ದರೆ ಮುಚ್ಚಿಹಾಕಲು ಪ್ರಯತ್ನ ಮಾಡುತ್ತಿದ್ದರು. ನಾವು ಸಿಐಡಿ ಗೆ ಮುಕ್ತ ಅವಕಾಶ ನೀಡಿದ್ದು, ತನಿಖೆ ಕೈಗೊಂಡಿದ್ದಾರೆ. ಯಾರೇ ತಪ್ಪಿ ತಪ್ಪಿತಸ್ಥರಿದ್ದರೂ ಕ್ರಮ ಕೈಗೊಳ್ಳಲಾಗುವುದು ಎಂದರು.ಪರೀಕ್ಷೆಗಳನ್ನು ಪುನಃ ಕೈಗೊಳ್ಳಲು ವಿದ್ಯಾರ್ಥಿಗಳು ಒತ್ತಾಯಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಸಿಐಡಿ ಸಮಗ್ರ ವರದಿ ನೀಡಿದ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link