ಸತತ 4 ಪಂದ್ಯ ಸೋತ ಮುಂಬೈ ಇಂಡಿಯನ್ಸ್ ತಂಡಕ್ಕೆ ನೀತಾ ಅಂಬಾನಿಯಿಂದ ವಿಶೇಷ ಸಂದೇಶ

IPL 2022:

ಐಪಿಎಲ್ 15ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಅತ್ಯಂತ ಕಳಪೆ ಪ್ರದರ್ಶನ ನಿಡುತ್ತಿದ್ದು ಮೊದಲ ನಾಲ್ಕು ಪಂದ್ಯಗಳಲ್ಲಿ ನಾಲ್ಕನ್ನು ಕೂಡ ಕಳೆದುಕೊಂಡಿದೆ. ಸಹಜವಾಗಿಯೇ ಇಡೀ ತಂಡ ಈ ಸೋಲುಗಳಿಂದ ಆತ್ಮವಿಶ್ವಾಸ ಕಳೆದುಕೊಂಡಿದೆ. ಈ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ವಿಶೇಷ ಸಂದೇಶವೊಂದು ಬಂದಿದೆ.ಈ ಮೂಲಕ ತಂಡದ ಆಟಗಾರರ ಆತ್ಮವಿಶ್ವಾಸ ಹೆಚ್ಚಾಗಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.

ಶನಿವಾರ ನಡೆದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಮುಂಬೈ ಸೋಲು ಅನುಭವಿಸಿದ ಬಳಿಕ ನಾಯಕ ರೋಹಿತ್ ಶರ್ಮಾ ಮಾತನಾಡಿದರು. ಈ ಸಂದರ್ಭದಲ್ಲಿ ಶರ್ಮಾ ಆರ್‌ಸಿಬಿ ವಿರುದ್ಧದ ಸೋಲು ಅರಗಿಸಿಕೊಳ್ಳಲು ಬಹಳ ಕಷ್ಟ ಎಂದಿದ್ದಾರೆ. ಇದರ ಜೊತೆಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ತಂಡದ ಮಾಲಕಿ ನೀತಾ ಅಂಬಾನಿಯಿಂದ ವಿಶೇಷ ಸಂದೇಶ ಬಂದಿದೆ. ಈ ಸಂದೇಶವನ್ನು ಎಂಐ ಫ್ರಾಂಚೈಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ರಾಮನವಮಿ ದಿನವೇ ಶ್ರೀರಾಮನ ಭಕ್ತರಿಗೆ ಸಿಹಿ ಸುದ್ದಿ: ಡಿ. 2023 ರೊಳಗೆ ಅಯೋಧ್ಯೆ ರಾಮಮಂದಿರ ಕಾಮಗಾರಿ ಪೂರ್ಣ

“ನಿಮ್ಮೆಲ್ಲರ ಮೇಲೆ ನನಗೆ ನಂಬಿಕೆ ಹಾಗೂ ವಿಶ್ವಾಸವಿದೆ. ನಾವು ಈ ಸ್ಥಿತಿಯಿಂದ ಹೊರಗೆ ಬರಲಿದ್ದೇವೆ. ನಾವು ಇಲ್ಲಿಂದ ಮುಂದೆ ಮೇಲಕ್ಕೇರುತ್ತಾ ಸಾಗಬೇಕಿದೆ. ನಾವು ನಮ್ಮ ಮೇಲೆ ನಂಬಿಕೆಯನ್ನು ಇರಿಸಿಕೊಳ್ಳಬೇಕು. ಹಾಗಾಗಿ ನಾವು ನಮ್ಮ ಗುರಿಯನ್ನು ಸಾಧಿಸಬಹುದು” ಎಂದು ನೀತಾ ಅಂಬಾನಿ ಈ ಮೂಲಕ ಆಟಗಾರರಿಗೆ ವಿಶೇಷ ಸಂದೇಶ ನೀಡಿದ್ದಾರೆ.

ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಆರಂಭೀಕ ಹಂತದಲ್ಲಿ ಸೋಲುಗಳೊಂದಿಗೆ ಟೂರ್ನಿಯನ್ನು ಆರಂಭಿಸುವುದು ಇದೇನು ಮೊದಲಲ್ಲ. 2014ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಮೊದಲ ಐದು ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. ಮೊದಲ ಗೆಲುವನ್ನು ಕಿಂಗ್ಸ್ ಇಲವೆನ್ ಪಂಜಾಬ್(ಈಗ ಪಂಜಾಬ್ ಕಿಂಗ್ಸ್) ವಿರುದ್ಧ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸಾಧಿಸಿತ್ತು. ಆ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಲೀಗ್ ಹಂತವನ್ನು 14 ಅಂಕಗಳೊಂದಿಗೆ 4ನೇ ಸ್ಥಾನಿಯಾಗಿ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿತ್ತು.

 ಇಂದು ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ವರ್ಚುವಲ್ ಸಭೆ!

ಅದಾದ ಬಳಿಕ 2015ರಲ್ಲಿ ಮೂಡ ಮುಂಬೈ ಇಂಡಿಯನ್ಸ್ ತಂಡ ಮೊದಲ 4 ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. ಆದರೆ ಅದಾದ ಬಳಿಕ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಟ್ರೋಫಿಯನ್ನು ಕೂಡ ಗೆದ್ದುಕೊಂಡಿತ್ತು. ಈ ಬಾರಿಯ ಟೂರ್ನಿಯಲ್ಲಿಯೂ ಕಳಪೆ ಆರಂಭದ ಹೊರತಾಗಿಯೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡಲು ಹೇಳಿದ್ದಾರೆ.

“ನಾವು ಇಂತಾ ಪರಿಸ್ಥಿತಿಯನ್ನು ಬಹಳ ಸಲ ಮೀರಿ ನಿಂತಿದ್ದು ಟ್ರೋಫಿಯನ್ನು ಕೂಡ ಗೆದ್ದುಕೊಂಡಿದ್ದೇವೆ. ಹಾಗಾಗಿ ನನಗೆ ನಿಮ್ಮೆಲ್ಲರ ಮೇಲೆ ಸಂಪೂರ್ಣ ನಂಬಿಕೆಯಿದೆ. ನಿಮ್ಮೆಲ್ಲರಲಗಲಿಯೂ ಈ ಆತ್ಮವಿಶ್ವಾಸವಿದ್ದರೆ ನಾವು ಈ ಸಾಧನೆಯನ್ನು ಮಾಡಲು ಸಾಧ್ಯವಿದೆ. ನಾನು ನಿಮ್ಮನ್ನು ಮತ್ತೊಂದು ಭಾಗದಲ್ಲಿ ನೋಡಲು ಬಯಸುತ್ತೇನೆ” ಎಂದಿದ್ದಾರೆ ನೀತಾ ಅಂಬಾನಿ.

ರಾಜ್ಯದ ಎಲ್ಲಾ ಶಾಲೆಗಳಲ್ಲಿ ಏ.14ರಂದು ಅಂಬೇಡ್ಕರ್ ಜಯಂತಿ ಕಡ್ಡಾಯ ಆಚರಣೆ : ಶಿಕ್ಷಣ ಇಲಾಖೆ ಆದೇಶ

“ನಿಮ್ಮೆಲ್ಲರಿಗೆ ಏನೆಲ್ಲಾ ಅಗತ್ಯವಿದೆಯೋ ಅದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಎಲ್ಲರೂ ಎಲ್ಲರ ಮೇಲೆಯೂ ನಂಬಿಕೆ ವಿಶ್ವಾಸವನ್ನು ಕಳೆದುಕೊಳ್ಳಬೇಡಿ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಯಾವಾಗಲೂ ನಿಮಗೆ ಬೆಂಬಲವಾಗಿರುತ್ತದೆ” ಎಂದು ನೀತಾ ಅಂಬಾನಿ ಹೇಳಿಕೆ ನೀಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ ತನ್ನ ಮುಂದಿನ ಪಂದ್ಯವನ್ನು ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಆಡಲಿದ್ದು ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ಏಪ್ರಿಲ್ 13 ಬುಧವಾರದಂದು ಈ ಪಂದ್ಯ ನಡೆಯಲಿದೆ.

ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link