ತುಮಕೂರು: ಹೆಣ್ಣುಮಕ್ಕಳ ರಕ್ಷಣೆಗಾಗಿ ವಿಶೇಷ ಪೊಲೀಸ್ ಕಾರ್ಯ ಪಡೆ ರಚನೆ..!

ತುಮಕೂರು

    ತುಮಕೂರಿನಲ್ಲಿ ತುಂಡ್ ಹೈಕ್ಳು ಇನ್ಮುಂದೆ ಬಾಲ ಬಿಚ್ಚುವ ಹಾಗಿಲ್ಲ. ಅಪ್ಪಿತಪ್ಪಿ ಕಾಲರ್ ಮೇಲೆ ಎತ್ತಿ ಬೆಡಗಿಯರಿಗೆ ಬುಲ್ ಬುಲ್ ಎಂದರೆ ಬೆತ್ತದ ಏಟು ಬೀಳುವುದು ಪಕ್ಕಾ.

   ಕರ್ನಾಟಕದಲ್ಲೇ ಫಸ್ಟ್ ಟೈಮ್ ತುಮಕೂರಿನಲ್ಲಿ ಮಹಿಳಾ ರಕ್ಷಣಾ ಪಡೆ ತುಮಕೂರಿನಲ್ಲಿ ರಚನೆಯಾಗಿದೆ. ಕಾಲೇಜುಗಳ ಮುಂದೆ ನಿಂತು ಹುಡ್ಗೀರ ಮುಂದೆ ಪೋಸ್ ಕೊಡುವ ಪೋಕರಿಗಳಿಗೆ ಪಾಠ ಕಲಿಸಲು ಕಲ್ಪತರು ಮಹಿಳಾ ಟೀಮ್ ಸನ್ನದ್ಧವಾಗಿದೆ.ತುಮಕೂರಿನಲ್ಲಿ ಮಹಿಳೆಯರು ಮತ್ತು ಯುವತಿಯರ ರಕ್ಷಣೆಗೆ ವಿಶೇಷ ಒತ್ತು ನೀಡಲಾಗುತ್ತಿದೆ. ಜಿಲ್ಲಾ ಪೊಲೀಸರು ರಚಿಸಿರುವ ಕಲ್ಪತರು ಮಹಿಳಾ ವಿಶೇಷ ಕಾರ್ಯಪಡೆಯನ್ನು ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಬೆತ್ತ ಹಿಡಿದು ನಿಂತಿದೆ.
   ತುಮಕೂರಿನಲ್ಲಿ ಕಲ್ಪತರು ಮಹಿಳಾ ಪೊಲೀಸ್ ಪಡೆಗೆ ವಿಶೇಷ ತರಬೇತಿಯನ್ನು ನೀಡಲಾಗುತ್ತಿದೆ. ಪ್ರತಿದಿನ ಯೋಗಾಭ್ಯಾಸದ ಜೊತೆಗೆ ನುರಿತ ಕರಾಟೆ ತರಬೇತುದಾರರಿಂದ ತರಬೇತಿ ನೀಡಲಾಗುತ್ತದೆ. ಇದರ ಜೊತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ಥಿಯರಿ ಕ್ಲಾಸ್ ತೆಗೆದುಕೊಳ್ಳಲಾಗುತ್ತಿದೆ.ಕಲ್ಪತರು ಮಹಿಳಾ ಪಡೆಯು ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿನಿಯರಿಗೆ ಹಾಗೂ ಕಾಲೇಜು ಯುವತಿಯರಿಗೆ ಸ್ವಯಂ ರಕ್ಷಣೆ ಬಗ್ಗೆ ತರಬೇತಿ ನೀಡುತ್ತಿದೆ. ಕಿಡಿಗೇಡಿಗಳಿಂದ ತಪ್ಪಿಸಿಕೊಳ್ಳುವುದು ಹೇಗೆ ಮತ್ತು ದಾಳಿಗೆ ಪ್ರತಿದಾಳಿಯೊಡ್ಡುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap