ಭಾರತದಲ್ಲೊಂದು ವಿಚಿತ್ರ ದೇವಾಲಯ : ಇದರ ವಿಶೇಷತೆ ಗೊತ್ತಾ…..?

ಸೇಲಂ

     ದೇವಾನುದೇವತೆಗಳ ವಿಗ್ರಹಗಳನ್ನು ಕೆತ್ತಿ, ಸಾಂಪ್ರದಾಯಿಕ ದೇವಾಲಯಗಳನ್ನು ನಿರ್ಮಿಸುವುದು ಅನಾದಿ ಕಾಲದಿಂದಲೂ ನಡೆದುಬಂದಿದೆ. ಇನ್ನು ಆಗಾಗ್ಗೆ ಮನುಷ್ಯರಿಗಾಗಿಯೂ ಅವರವರ ಭಾವ ಭಕುತಿಗೆ ತಕ್ಕಂತೆ ವಿಗ್ರಹಗಳನ್ನು ಪ್ರತಿಷ್ಠಾಪಿಸುವುದುಂಟು. ಆದರೆ ತಮಿಳುನಾಡಿನ ಸೇಲಂನಲ್ಲಿ ವ್ಯಕ್ತಿಯೊಬ್ಬರು ಅನ್ಯಲೋಕದ ದೇವರಿಗಾಗಿ ದೇವಾಲಯವನ್ನು ನಿರ್ಮಿಸಿದ್ದಾರೆ. ಅನ್ಯಲೋಕದ ಆ ದೇವ ಭೂಲೋಕದ ತನ್ನ ಭಕ್ತರನ್ನು ನೈಸರ್ಗಿಕ ವಿಕೋಪಗಳಿಂದ ರಕ್ಷಿಸುವ ಶಕ್ತಿ ಹೊಂದಿದ್ದಾರೆ ಎನ್ನುತ್ತಾರೆ ಆ ದೇವಸ್ಥಾನವ ನಿರ್ಮಿಸಿದಾತ.

   ಜಗತ್ತಿನಲ್ಲಿ ನೈಸರ್ಗಿಕ ವಿಕೋಪಗಳು ಹೆಚ್ಚುತ್ತಿರುವಾಗ, ಅವುಗಳನ್ನು ತಡೆಯುವ ಶಕ್ತಿ ಅನ್ಯಗ್ರಹ ಜೀವಿಗಳಿಗೆ ಇದೆ ಎಂದು ಲೋಗನಾಥನ್ ಅವರು ನಂಬುತ್ತಾರೆ. ಅವರ ನಂಬಿಕೆಯ ಪ್ರಕಾರ, ಏಲಿಯನ್‌ಗಳು ಚಲನಚಿತ್ರಗಳಲ್ಲಿ ಚಿತ್ರಿಸುವಂತಹವರಲ್ಲ. ಬಾಳೆ ಎಲೆಯನ್ನು ದೇಹಕ್ಕೆ ಸುತ್ತಿಕೊಂಡರೆ ಅನ್ಯಗ್ರಹ ಜೀವಿಗಳ ವಿಕಿರಣದಿಂದ ಪಾರಾಗಬಹುದು ಎಂಬ ಹೇಳಿಕೆಯನ್ನೂ ಲೋಗನಾಥನ್ ನೀಡಿದ್ದಾರೆ.
   ಲೋಕನಾಥನ್​​​ ಅವರು ಅನ್ಯಗ್ರಹ ಜೀವಿಗಳಿಗಾಗಿ ನಿರ್ಮಿಸಿರುವ ದೇಗುಲದ ನಿರ್ಮಾಣ ಕಾರ್ಯ ಇನ್ನೂ ನಡೆಯುತ್ತಿದ್ದು, ದಿನನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿರುವುದರಿಂದ ಇಲ್ಲಿನ ವಿಶಿಷ್ಟ ದೇವಾಲಯದ ಕುರಿತು ಚರ್ಚೆ ನಡೆದಿದೆ.

Recent Articles

spot_img

Related Stories

Share via
Copy link
Powered by Social Snap