ಹೊಸ ವರ್ಷ ಪ್ರಯುಕ್ತ ರಾಜ್ಯದ ಈ ನಗರಗಳಿಗೆ ವಿಶೇಷ ರೈಲು

ಹುಬ್ಬಳ್ಳಿ

    ಕ್ರಿಸ್​ಮಸ್  ಹಬ್ಬದ ಮತ್ತು ಹೊಸ ವರ್ಷ​ದ  ಪ್ರಯುಕ್ತ ನೈಋತ್ಯ ರೈಲ್ವೆ ಕರ್ನಾಟಕದ ಪ್ರಮುಖ ನಗರಗಳ ನಡುವೆ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್​ ಮುಖಾಂತರ ನೈಋತ್ಯ ರೈಲ್ವೆ ಮಾಹಿತಿ ಹಂಚಿಕೊಂಡಿದೆ. ಕ್ರಿಸ್ಮಸ್ ಹಬ್ಬ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ಹುಬ್ಬಳಿ-ಎಸ್‌ಎಂವಿಟಿ ಬೆಂಗಳೂರು, ಯಶವಂತಪುರ-ಮಂಗಳೂರು ಮತ್ತು ವಾಸ್ಕೋ ಡ ಗಾಮಾ-ಎಸ್‌ಎಂವಿಟಿ ಬೆಂಗಳೂರು ನಿಲ್ದಾಣಗಳ ನಡುವೆ ವಿಶೇಷ ಎಕ್ಸ್​ಪ್ರೆಸ್ ರೈಲುಗಳನ್ನು ನೈಋತ್ಯ ರೈಲ್ವೆ ಓಡಿಸಲಿದೆ. 

     ರೈಲು ಸಂಖ್ಯೆ 07306 ಎಸ್‌ಎಂವಿಟಿ ಬೆಂಗಳೂರು-ವಾಸ್ಕೋ ಡ ಗಾಮಾ ವಿಶೇಷ ಎಕ್ಸ್ ಪ್ರೆಸ್ ರೈಲು 22 ರಂದು ಎಸ್‌ಎಂವಿಟಿ ಬೆಂಗಳೂರಿನಿಂದ ಸಂಜೆ 6:15 ಕ್ಕೆ ಹೊರಟು, ಮರುದಿನ ವಾಸ್ಕೋ ಡ ಗಾಮಾ ನಿಲ್ದಾಣವನ್ನು ಬೆಳಿಗ್ಗೆ 8:45 ಕ್ಕೆ ತಲುಪಲಿದೆ.

   ಮರಳಿ, ಇದೇ ರೈಲು (07307) ಡಿಸೆಂಬ‌ರ್ 21 ಮತ್ತು 23, 2024 ರಂದು ವಾಸ್ಕೋ ಡ ಗಾಮಾ ನಿಲ್ದಾಣದಿಂದ ಬೆಳಿಗ್ಗೆ 10 ಗಂಟೆಗೆ ಹೊರಟು. ಅದೇ ದಿನ ರಾತ್ರಿ 11:55ಕ್ಕೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ. 

   ರೈಲು ಸಂಖ್ಯೆ 07308 ಎಎಂವಿಟಿ ಬೆಂಗಳೂರು-ವಾಸ್ಕೋ ಡ ಗಾಮಾ ವಿಶೇಷ ಎಕ್ಸ್ ಪ್ರೆಸ್ ರೈಲು ಡಿಸೆಂಬರ್ 24 ರಂದು ಎಸ್‌ಎಂವಿಟಿ ಬೆಂಗಳೂರಿನಿಂದ ರಾತ್ರಿ 8:30 ಕ್ಕೆ ಹೊರಟು, ಮರುದಿನ ಮಧ್ಯಾಹ್ನ 12:00 ಗಂಟೆಗೆ ವಾಸೋ ಡ ಗಾಮಾ ನಿಲ್ದಾಣವನ್ನು ತಲುಪಲಿದೆ.ವಾಪಸು, ರೈಲು ಸಂಖ್ಯೆ 07309 ವಾಸೋ ಡ ಗಾಮಾ-ಎಸ್‌ಎಂವಿಟಿ ಬೆಂಗಳೂರು ವಿಶೇಷ ಎಕ್ಸ್ ಪ್ರೆಸ್ ರೈಲು ಡಿಸೆಂಬರ್ 29 ರಂದು ವಾಸ್ಕೋ ಡ ಗಾಮಾದಿಂದ ಮಧ್ಯಾಹ್ನ 2:30ಕ್ಕೆ ಹೊರಟು ಮರುದಿನ ಬೆಳಿಗ್ಗೆ 5:15ಕ್ಕೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ.

   ರೈಲು ಸಂಖ್ಯೆ 07310 ಎಸ್‌ಎಂವಿಟಿ ಬೆಂಗಳೂರು-ವಾಸೋ ಡ ಗಾಮಾ ವಿಶೇಷ ಎಕ್ಸ್ ಪ್ರೆಸ್ ರೈಲು ಡಿಸೆಂಬರ್ 30 ರಂದು ಎಸ್‌ಎಂವಿಟಿ ಬೆಂಗಳೂರಿನಿಂದ ರಾತ್ರಿ 8:30ಕ್ಕೆ ಹೊರಟು, ಮರುದಿನ ಮಧ್ಯಾಹ್ನ 12:00 ಗಂಟೆಗೆ ವಾಸ್ಕೋ-ಡ-ಗಾಮಾ ನಿಲ್ದಾಣವನ್ನು ತಲುಪಲಿದೆ.ಪುನಃ ಇದೇ ರೈಲು (07311) ಜನವರಿ 1 ರಂದು ವಾಸೋ-ಡ-ಗಾಮಾದಿಂದ ರಾತ್ರಿ 10:00 ಗಂಟೆಗೆ ಹೊರಟು, ಮರುದಿನ ಮಧ್ಯಾಹ್ನ 12:00 ಗಂಟೆಗೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ.

   07306/07307, 07308/07309 ಮತ್ತು 07310/07311 ಈ ರೈಲುಗಳು ಎರಡೂ ಮಾರ್ಗಗಳಲ್ಲಿ ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ದಾವಣಗೆರೆ ಹರಿಹರ, ರಾಣಿಬೆನೂರು, ಎಸ್‌ಎಂಎಂ ಹಾವೇರಿ, ಎಸ್‌ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಲೋಂಡಾ, ಕ್ಯಾಸಲ್ ರಾಕ್, ಕುಲೆಮ್, ಸಾನ್ನೊರ್ಡೆಮ್ ಮತ್ತು ಮಡಗಾಂವ್ ಜಿಲ್ದಾಣಗಳಲ್ಲಿ ನಿಲ್ಲಲಿವೆ.ಈ ರೈಲುಗಳು ಎರಡು ಎಸಿ ಟು ಟೈರ್ ಬೋಗಿಗಳು, 15 ಎಸಿ ತ್ರಿ ಟೈರ್ ಬೋಗಿಗಳು ಮತ್ತು 2 ಲಗೇಜ್ / ಜನರೇಟರ್,  ಬ್ರೇಕ್ ವ್ಯಾನ್​ಗಳನ್ನು ಹೊಂದಿವೆ. 

   ರೈಲು ಸಂಖ್ಯೆ 06505 ಯಶವಂತಪುರ-ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್ ಪ್ರೆಸ್ ರೈಲು ಡಿಸೆಂಬರ್ 23 ಮತ್ತು 27 ರಂದು ರಾತ್ರಿ 11.55ಕ್ಕೆ ಯಶವಂತಪುರದಿಂದ ಹೊರಟು, ಮರುದಿನ ಬೆಳಗ್ಗೆ 11.45 ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.ಮರಳಿ, ಇದೇ ರೈಲು (06506) ಡಿಸೆಂಬರ್ 24 ಮತ್ತು 28 ರಂದು ಮಂಗಳೂರು ಜಂಕ್ಷನ್ ನಿಲ್ದಾಣದಿಂದ ಮಧ್ಯಾಹ್ನ 1:00 ಗಂಟೆಗೆ ಹೊರಟು, ಅದೇ ದಿನ ರಾತ್ರಿ 10.30 ಕ್ಕೆ ಯಶವಂತಪುರ ತಲುಪಲಿದೆ.ಈ ರೈಲು ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು ಮತ್ತು ಬಂಟ್ವಾಳ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.

   ಪ್ರಯಾಣಿಕರು ಅಧಿಕೃತ   ವೆಬ್​​ಸೈಟ್​ಗೆ ಭೇಟಿ ನೀಡಿ. NTES ಅಪ್ಲಿಕೇಶನ್​​ ಬಿಳಸಿ ಅಥವಾ 139 ನಂಬರಗೆ ಡಯಲ್ ಮಾಡುವ ಮೂಲಕ ಈ ರೈಲುಗಳ ಪ್ರತಿ ನಿಲ್ದಾಣದ ಆಗಮನ/ನಿರ್ಗಮನ ಸಮಯ ಮತ್ತು ಇತರ ಮಾಹಿತಿಯನ್ನು ವಡೆದುಕೊಳ್ಳಬಹುದು.

Recent Articles

spot_img

Related Stories

Share via
Copy link