ಅಜರುದ್ದೀನ್ ದಾಖಲೆ ಪುಡಿಗಟ್ಟಿದ ವಿರಾಟ್ ಕೊಹ್ಲಿ..!

ರಾಂಚಿ

    ಭಾರತೀಯ ಟೆಸ್ಟ್ ನಾಯಕರುಗಳ ಪೈಕಿ ಎದುರಾಳಿಗಳನ್ನು ಅತಿ ಹೆಚ್ಚು ಬಾರಿ ಫಾಲೋಆನ್‍ಗೆ ಗುರಿಯಾಗಿರಿಸಿದ ಭಾರತದ ಮೊದಲ ನಾಯಕ ಎಂಬ ದಾಖಲೆಯನ್ನು ದಕ್ಷಿಣ ಆಫ್ರಿಕಾ ವಿರುದ್ದದ ಮೂರನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮಾಡಿದರು. ಈ ಮೂಲಕ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ದಾಖಲೆಯನ್ನು ಮುರಿದಿದ್ದಾರೆ.

     ರಾಂಚಿಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಚೊಚ್ಚಲ ದ್ವಿಶತಕದ ನೆರವಿನಿಂದ ಟೀಮ್ ಇಂಡಿಯಾ ಒಂಬತ್ತು ವಿಕೆಟ್ ನಷ್ಟಕ್ಕೆ 497 ರನ್‍ಗಳ ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಘೋಷಿಸಿತ್ತು.ಬಳಿಕ ಭಾರತೀಯ ಸಾಂಘಿಕ ಬೌಲಿಂಗ್ ದಾಳಿಗೆ ಕುಸಿತ ಕಂಡ ದಕ್ಷಿಣ ಆಫ್ರಿಕಾ ಮೂರನೇ ದಿನದಾಟದಲ್ಲಿ ಕೇವಲ 162 ರನ್‍ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ವಿರಾಟ್ ಕೊಹ್ಲಿ ಫಾಲೋಆನ್ ಹೇರಿದ್ದರು. ವಿರಾಟ್ ಕೊಹ್ಲಿ ಎಂಟನೇ ಬಾರಿಗೆ ಎದುರಾಳಿಗಳ ಮೇಲೆ ಫಾಲೋಆನ್ ಹೇರಿದ್ದಾರೆ. ಈ ಮೂಲಕ ಮಾಜಿ ನಾಯಕ ಅಜರುದ್ದೀನ್ ದಾಖಲೆಯನ್ನು ಮುರಿದಿದ್ದಾರೆ.

ಅತಿ ಹೆಚ್ಚು ಬಾರಿ ಫಾಲೋ ಆನ್ ಹೇರಿದ ಭಾರತೀಯ ನಾಯಕರು:
ವಿರಾಟ್ ಕೊಹ್ಲಿ: 8*
ಮೊಹಮ್ಮದ್ ಅಜರುದ್ದೀನ್: 7
ಮಹೇಂದ್ರ ಸಿಂಗ್ ಧೋನಿ: 5
ಸೌರವ್ ಗಂಗೂಲಿ: 4

     ಅಷ್ಟೇ ಯಾಕೆ ಏಳು ಬಾರಿ ಫಾಲೋಆನ್ ಹೇರುವ ಅವಕಾಶವಿದ್ದರೂ ವಿರಾಟ್ ಕೊಹ್ಲಿ ಫಾಲೋಆನ್ ಹೇರದೆ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮುಂದುವರಿಸಿತ್ತು. ಅಂದ ಹಾಗೆ ಫಾಲೋಆನ್ ಹೇರಿದ ಏಳು ಪಂದ್ಯಗಳ ಪೈಕಿ ಐದರಲ್ಲಿ ಗೆಲುವು ಹಾಗೂ ಎರಡು ಡ್ರಾ ಫಲಿತಾಂಶವನ್ನು ದಾಖಲಿಸಿತ್ತು.

     1993/94ರಲ್ಲಿ ಶ್ರೀಲಂಕಾ ವಿರುದ್ಧದ ತವರಿನ ಸರಣಿಯ ಬಳಿಕ ಭಾರತವು ಇದೇ ಮೊದಲ ಬಾರಿಗೆ ಎದುರಾಳಿಗಳ ಮೇಲೆ ಎರಡನೇ ಬಾರಿಗೆ ಫಾಲೋಆನ್ ಹೇರುತ್ತಿದೆ. ಪುಣೆ ಟೆಸ್ಟ್ ಪಂದ್ಯದಲ್ಲೂ ಭಾರತ ಹರಿಣಗಳ ಮೇಲೆ ಫಾಲೋಆನ್ ಹೇರಿತ್ತು. 1964/65ನೇ ಸಾಲಿನಲ್ಲಿ ದಕ್ಷಿಣ ಆಫ್ರಿಕಾ ಕೊನೆಯದಾಗಿ ಸರಣಿಯೊಂದರಲ್ಲಿ ಎರಡೆರಡು ಬಾರಿ ಫಾಲೋಆನ್‍ಗೆ ಗುರಿಯಾಗಿತ್ತು.ಒಟ್ಟಾರೆ ಮೂರನೇ ದಿನದಾಟ ಮುಕ್ತಾಯಕ್ಕೆ ಪಾಫ್ ಡುಪ್ಲೆಸಿಸ್ ಪಡೆ 46 ಓವರ್‍ಗಳಿಗೆ ಎಂಟು ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿದೆ. ಇನ್ನೂ 203 ರನ್ ಹಿನ್ನಡೆಯಲ್ಲಿದ್ದು, ಕೈಯಲ್ಲಿ ಕೇವಲ ಎರಡು ವಿಕೆಟ್ ಇದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link