ಕಾಂಗ್ರೆಸ್‌ ಪಕ್ಷ ಟೀಕಿಸಿದ ಶ್ರೀರಾಮುಲು

ಬಳ್ಳಾರಿ

     ನಮ್ಮದೇನಿದ್ದರು ಫಲಾನುಭವಿಗಳಿಗೆ ಯೋಜನೆಗಳನ್ನು ಮುಟ್ಟಿಸಿದ ಪ್ರೋಗ್ರೆಸ್ ಕಾರ್ಡು ಕೊಡುತ್ತೇವೆ, ಕೆಲವರು ಚುನಾವಣೆ ಹತ್ತಿರ ಬಂದಾಗ ಕೊಡುತ್ತಿರುವ ಗ್ಯಾರೆಂಟಿ, ವಾರೆಂಟಿ ಕಾರ್ಡುಗಳನ್ನು ನಾವು ನೀಡುವುದಿಲ್ಲ ಎಂದು ಕಾಂಗ್ರೆಸ್ ಪಕ್ಷವನ್ನು ಸಾರಿಗೆ ಸಚಿವ ಬಿ.ಶ್ರೀರಾಮುಲು ಟೀಕಿಸಿದ್ದಾರೆ.

    ಅವರು ಇಂದು ನಗರದ ಮುನಿಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಮ್ಮ ಜೀವನದಲ್ಲಿ ಗ್ಯಾರೆಂಟಿ ಪದಕ್ಕೆ ಅರ್ಥವೇ ಗೊತ್ತಿಲದವರು ನಿಮಗೆ ಗ್ಯಾರೆಂಟಿ, ವಾರಂಟಿ ಕಾರ್ಡುಗಳನ್ನು ನೀಡುತ್ತಿದ್ದಾರೆ.

    ಆದರೆ ಕೇಂದ್ರ ಮತ್ತು ರಾಜ್ಯದಲ್ಲಿ ಡಬಕ್ ಇಂಜಿನ್ ಸರ್ಕಾರದಲ್ಲಿ ಜಿಲ್ಲೆಯಲ್ಲಿನ 23 ಸಾವಿರದ 570 ಫಲಾನುಭವಿಗಳಿಗೆ ವಿವಿಧ ಯೋಜನೆಗಳಡಿ ನಾಯಾಪೈಸೆ ಸೋರಿಕೆಯಾಗದ ರೀತಿಯಲ್ಲಿ 1649 ಕೋಟಿ ರೂ ಅನುದಾನ ಪಡೆದಿದ್ದಾರೆಂದು ತಿಳಿಸಿದರು. ರೈತರಿಗೆ ವಾರ್ಷಿಕ ಆರು ಸಾವಿರದಂತೆ ನಾಲ್ಕು ಸಾವಿರ ಕೋಟಿ ರೂಗಳನ್ನು ಡಿಬಿಟಿ ಮೂಲಕ ನೀಡಿದೆ. ಈಬಾರಿ ಕಿಸಾನ್ ಕ್ರೆಡಿಕ್ ಕಾರ್ಡು ಇರುವ ರೈತರಿಗೆ ಹತ್ತು ಸಾವಿರ ರೂ ನೀಡುತ್ತದೆ ಎಂದರು.

   ಫಸಲ ಭೀಮಾ ಯೋಜನೆ ಹಣ ರೈತರಿಗೆ ನೇರವಾಗಿ ತಲುಪುತ್ತದೆ. ಕೃಷ್ಣದೇವರಾಯ ಕಾಲ ಹೇಗೆ ಸುವರ್ಣ ಯುಗವಾಗಿತ್ತೋ. ಕಳೆದ ಎಂಟು ವರ್ಷದ ಮೋದಿ ಕಾಲವೂ ಸುವರ್ಣ ದಿನದ ಕಾಲವಾಗಿದೆ ಜನರು ಸರ್ಕಾರದ ಬಾಗಿಲಿಗೆ ಹೋಗೋದಲ್ಲ ಸರ್ಕಾರವೇ ಜನರ ಮನೆಗೆ ಬಾಗಿಲಿಗೆ ಬರಲಿದೆಂದರು. ಮೀಸಲಾತಿ ಹೆಚ್ಚಳ ವಿಚಾರ ಪ್ರಸ್ತಾಪ. ಮೀಸಲಾತಿ ಹೆಚ್ಚಳ ಮಾಡಿದ್ದು ಬಿಜೆಪಿ ಎಂದು ಸಮರ್ಥಿಸಿಕೊಂಡರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap