ಶಿರಸಿ:
ನಗರದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾಗಿರುವ,ಸಹಕಾರಿ ಧುರೀಣ ದಿ.ವಸಂತ ಶೆಟ್ಟಿ ಇವರಿಂದ ಸ್ಥಾಪಿತವಾದ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘ 2024 25 ನೇ ಸಾಲಿನಲ್ಲಿ 51 ಲಕ್ಷ ರೂ ನಿವ್ವಳ ಲಾಭ ಗಳಿಸಿದೆ. ಇದೇ ಸಂದರ್ಭದಲ್ಲಿ 24 ವರ್ಷಗಳನ್ನು ಪೂರೈಸಿ ಬೆಳ್ಳಿ ಹಬ್ಬದ ಸಂಭ್ರಮಕ್ಕೆ ಪಾದಾರ್ಪಣೆ ಮಾಡುತ್ತಿದೆ.ರಾಷ್ಟ್ರೀಯ ಬ್ಯಾಂಕುಗಳ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಿ ಸಂಘದ ಸಿಬ್ಬಂದಿಗಳ ಅವಿರತ ಶ್ರಮದಿಂದ ಸಂಘವು ಈ ಲಾಭಗಳಿಸಿದ್ದು ಅತ್ಯಂತ ಕಡಿಮೆ ಬಡ್ಡಿ ದರ ಶೇಕಡ 9ರಲ್ಲಿ ಬಂಗಾರು ದಾಗಿನ ಸಾಲ ಹಾಗೂ ಶೇಕಡ 11ಬಡ್ಡಿ ದರದಲ್ಲಿ ವಾಹನ ಸಾಲ ನೀಡುತ್ತಲಿದೆ.
ಸಂಘವು 2001ರಲ್ಲಿ ತನ್ನ ವ್ಯವಹಾರ ಪ್ರಾರಂಭಿಸಿದ್ದು ಸಂಘ ಸರ್ವತೋಮುಖ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ ಎಂದು ಸಂಘದ ಅಧ್ಯಕ್ಷ ಶ್ರೀಧರ್ ಮೊಗೇರ ಹೇಳಿದರು. ಅವರಿಂದು ಬ್ಯಾಂಕಿನ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಸಂಘ ರಜತ ಮಹೋತ್ಸವದತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ಬ್ಯಾಂಕಿನ ಸಂಸ್ಥಾಪಕ ದಿ.ವಸಂತಶೆಟ್ಟಿ ಅವರ ಸ್ಮರಣೆಯಲ್ಲಿ, ಸಹಕಾರಿ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಎಸ್.ಪಿ.ಶೆಟ್ಟಿರವರಿಗೆ ಹಾಗೂ ಶ್ರೀನಿವಾಸ ಹೆಬ್ಬಾರ್ ಇವರಿಗೆ ಈ ಬಾರಿಯ ಸರ್ವಸಾಧಾರಣ ಸಭೆಯಲ್ಲಿ ಸಹಕಾರಿ ವಸಂತ ಪ್ರಶಸ್ತಿ ಪ್ರಧಾನ ಮಾಡಲಾಗುವುದೆಂದು ತಿಳಿಸಿದರು.
