ಆನೆಗೊಂದಿ ರಾಜವಂಶಸ್ಥರಾದ ಎಸ್.ಆರ್.ಕೆ. ರಾಜಬಹಾದ್ದೂರ್ ವಿಧಿವಶ ….!

ಗಂಗಾವತಿ: 

    ಆನೆಗೊಂದಿ ರಾಜವಂಶಸ್ಥ ಎಸ್.ಆರ್.ಕೆ. ರಾಜಬಹಾದ್ದೂರ್(79) ನ.10ರ ರವಿವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ.ಮೃತ ಎಸ್.ಆರ್.ಕೆ ರಾಜಬಹದ್ದೂರ್ ಅವರು ಮೂಲತಃ ಆಂದ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲ್ತುರ್ ರಾಜಮನೆತನಕ್ಕೆ ಸೇರಿದ್ದವರು.

   ಗಂಗಾವತಿಯ ಮಾಜಿ ಶಾಸಕರಾಗಿದ್ದ ದಿವಂಗತ ತಿರುಮಲದೇವರಾಯರವರ ಜೇಷ್ಠ ಪುತ್ರಿ ವಿಜಯಕುಮಾರಿ ಅವರನ್ನು ವಿವಾಹವಾದ ನಂತರ ಆನೆಗೊಂದಿಯಲ್ಲಿ ನೆಲೆಸಿದ್ದರು.1978 ರಿಂದ 1983 ರವರೆಗೆ ಆನೆಗೊಂದಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ‌, ನಂತರ 1985 ರಲ್ಲಿ ಮಂಡಲ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಮೃತರು ಓರ್ವ ಪುತ್ರ ಮತ್ತು ಪುತ್ರಿ ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.ನ.10ರ ರವಿವಾರ ಸಂಜೆ 4 ಗಂಟೆಗೆ ಹಿಂದೂ ಕ್ಷತ್ರಿಯ ಧಾರ್ಮಿಕ ಪದ್ಧತಿಯಂತೆ ಸಾರ್ವಜನಿಕ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ ಜರುಗಿದೆ ಎಂದು ಕುಟುಂಬ ವರ್ಗ ತಿಳಿಸಿದೆ.

Recent Articles

spot_img

Related Stories

Share via
Copy link
Powered by Social Snap