sslc ಫಲಿತಾಂಶ ಪ್ರಕಟ…..!

ಬೆಂಗಳೂರು

    ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಇಂದು ಎಸ್‍ಎಸ್‍ಎಲ್‌ಸಿ ಪರೀಕ್ಷೆ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಈ ಬಾರಿ ನಾಲ್ಕು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ.

     ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಇಂದು ಸುದ್ದಿಗೋಷ್ಟಿಯಲ್ಲಿ, ‘ಚಿತ್ರದುರ್ಗ ಹೆಚ್ಚು ಫಲಿತಾಂಶವನ್ನು ಪಡೆದುಕೊಂಡಿದೆ. ಎರಡನೆಯ ಜಿಲ್ಲೆ ಮಂಡ್ಯ, ಮೂರನೇ ಜಿಲ್ಲೆ ಹಾಸನ ಜಿಲ್ಲೆಯಾಗಿದೆ. ಬೆಂಗಳೂರು ಗ್ರಾಮಾಂತರ ನಾಲ್ಕನೇ ಸ್ಥಾನದಲ್ಲಿ ಇದೆ. ಕೊನೆಯ ಜಿಲ್ಲೆ ಯಾದಗಿರಿ ಜಿಲ್ಲೆಯಾಗಿದೆ. ನಾಲ್ಕು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ.7 ಲಕ್ಷದ 619 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಾಲಕರು ಶೇ80.08ರಷ್ಟು ಉತ್ತೀರ್ಣರಾಗಿದ್ದಾರೆ’ ಎಂದು ತಿಳಿಸಿದೆ.ಚಿತ್ರದುರ್ಗ 96.80%, ಹಾಸನ 96.68%, ಮಂಡ್ಯ 96.74%, ಯಾದಗಿರಿ 75.49% ರಷ್ಟು ಫಲಿತಾಂಶಗಳನ್ನು ಪಡೆದಿದೆ.
 

ಕರ್ನಾಟಕ SSLC ಫಲಿತಾಂಶ 2023ರ ಫಲಿತಾಂಶ ಸೋಮವಾರ (ಮೇ 8) ಪ್ರಕಟವಾಗಿದ್ದು, ಶೇಕಡಾ 83.89 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ.

     ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ  ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷ ರಾಮನಾಥ್ ಮಾತನಾಡಿ, ಶೇಕಡಾ 83.89 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇಕಡಾ 87.87 ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಈ ಬಾರಿ 8,35,102 ಜನ ವಿದ್ಯಾರ್ಥಿಗಳ ಹಾಜರು ಆಗಿದ್ದರು. 7,00,619 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಗ್ರಾಮೀಣ ವಿದ್ಯಾರ್ಥಿಗಳ ಮೇಲುಗೈ: ಗ್ರಾಮೀಣ ಭಾಗದಲ್ಲಿ ಶೇ.87 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನಗರ ಪ್ರದೇಶದ ಮಕ್ಕಳಿಗಿಂತ ಗ್ರಾಮೀಣ ಪ್ರದೇಶದಲ್ಲಿನ ಹೆಚ್ಚಿನ ಫಲಿತಾಂಶ ಲಭ್ಯವಾಗಿದೆ. ಗ್ರಾಮೀಣ ಭಾಗದಲ್ಲಿ ಶೇ.87 ಹಾಗೂ ನಗರ ಪ್ರದೇಶದಲ್ಲಿ ಶೇ.79 ಫಲಿತಾಂಶ ಸಿಕ್ಕಿದೆ. ಸರ್ಕಾರಿ ಶಾಲೆಗಳಲ್ಲಿ ಶೇಕಡ 86.74 ಉತ್ತಮ ಫಲಿತಾಂಶ ಲಭ್ಯವಾಗಿದೆ. ಅನುದಾನ ರಹಿತ ಶಾಲೆಗಳಲ್ಲಿ ಶೇ.90.89 ಫಲಿತಾಂಶ ಲಭ್ಯವಾಘಿದೆ. ಅನುದಾನಿತ ಶಾಲೆಯಲ್ಲಿ 85.64% ಫಲಿತಾಂಶ ಸಿಕ್ಕಿದೆ. ಕನ್ನಡದಲ್ಲಿ 14,983 ವಿದ್ಯಾರ್ಥಿಗಳು 125 ಅಂಕ ಪಡೆದಿದ್ದಾರೆ.

ನಾಲ್ಕು ವಿದ್ಯಾರ್ಥಿಗಳು ಶೇ.100 ಫಲಿತಾಂಶ: (625 ಕ್ಕೆ 625 ಅಂಕ ಟಾಪರ್ಸ್‌).
625- ಭೂಮಿಕ ಪೈ, ನ್ಯೂ ಮೆಕಾಲೆ ಇಂಗ್ಲೀಷ್ ಸ್ಕೂಲ್, ಹೊಸೂರು ರೋಡ್ , ಬೆಂಗಳೂರು
625 – ಯಶಸ್ಸ್ ಗೌಡ, ಬಾಲಗಂಗಾಧರ ಸ್ವಾಮಿ ಹೈಸ್ಕೂಲ್ ಚಿಕ್ಕಬಳ್ಳಾಪುರ
625 – ಅನುಪಮ ಶ್ರೀಶೈಲ್ ಹಿರಿಹೋಳಿ, ಶ್ರೀಕಂಠೇಶ್ವರ ಪ್ರೌಢಶಾಲೆ, ಸೌದತ್ತಿ, ಬೆಳಗಾವಿ ಜಿಲ್ಲೆ
625- ಭೀಮನಗೌಡ ಹನುಮಂತ ಗೌಡ ಬೀರಾದರ್ ಪಾಟೀಲ್, ಆಕ್ಸ್‌ಫರ್ಡ್‌ ಇಂಗ್ಲೀಷ್‌ ಹೈಸ್ಕೂಲ್, ಮುದ್ದೆಬೀಹಾಳ ಸರ್ಕಾರಿ ಶಾಲೆಯಲ್ಲಿ ಉತ್ತಮ ಫಲಿತಾಂಶ: 61,003 ವಿದ್ಯಾರ್ಥಿಗಳು ಶೇ.90ರಿಂದ 100 ಶೇಕಾಡವಾರು ಅಂಕ ಪಡೆದಿದ್ದಾರೆ. 1,517 ಸರ್ಕಾರಿ ಶಾಲೆಗಳು 100ಕ್ಕೆ 100 ರಿಸರ್ಲ್ಟ್ ಪಡೆದಿದ್ದಾರೆ. ಯಾವುದೇ ಸರ್ಕಾರಿ ಶಾಲೆಯಲ್ಲಿ ಶೂನ್ಯ ಫಲಿತಾಂಶ ಇಲ್ಲ. ಆದರೆ, ಖಾಸಗಿ ಮತ್ತು ಅನುದಾನಿತ ಶಾಲೆಗಳು ಸೇರಿ ಒಟ್ಟು 34 ಶಾಲೆಗಳಲ್ಲಿ ಶೂನ್ಯ ಫಲಿತಾಂಶವಾಗಿದೆ.

ಚಿತ್ರದುರ್ಗ ಪ್ರಥಮ, ಯಾದಗಿರಿ ಕೊನೆಯ ಸ್ಥಾನ: ಚಿತ್ರದುರ್ಗ ಜಿಲ್ಲೆ ಹೆಚ್ಚಿನ ಫಲಿತಾಂಶ ಲಭ್ಯವಾಗಿದ್ದು, ಶೇ.96 ಫಲಿತಾಂಶದೊಂದಿಗೆ ಪ್ರಥಮ ಸ್ಥಾನದಲ್ಲಿದೆ.ಮಂಡ್ಯ ಜಿಲ್ಲೆಯು ಶೇಕಡಾ 96.74 ಫಲಿತಾಂಶ ಪಡೆದಿದ್ದು, 2ನೇ ಸ್ಥಾನ ಪಡೆದಿದೆ. ಹಾಸನ 96,.68 ಸ್ಥಾನದೊಂದಿಗೆ 3ನೇ ಸ್ಥಾನ ಪಡೆದಿದೆ. ಉಳಿದಂತೆ ಕೊನೆಯ ಸ್ಥಾನದಲ್ಲಿ ಯಾದಗಿರಿ ಜಿಲ್ಲೆಯಿದ್ದು, ಶೇ.75.49 ಫಲಿತಾಂಶವನ್ನು ಪಡೆದುಕೊಂಡಿದೆ.

ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್‌ ಮಾಡಿ:
ಪರೀಕ್ಷಾ ಫಲಿತಾಂಶ ನೋಡಲು ವಿದ್ಯಾರ್ಥಿಗಳು ಅನುಸರಿಸಬೇಕಾದ ಮಾಹಿತಿ ಇಲ್ಲಿದೆ.
ಅಧಿಕೃತ ವೆಬ್‌ಸೈಟ್ ಗೆ ಭೇಟಿ ಮುಖಪುಟದಲ್ಲಿ ಕರ್ನಾಟಕ SSLC 2023 ಫಲಿತಾಂಶ ಲಿಂಕ್ ಅನ್ನು ಒತ್ತಿರಿ ತೆರೆಯುವ ಹೊಸ ಪುಟದಲ್ಲಿ ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ ಮತ್ತು ವಿವರಗಳನ್ನು ಸಲ್ಲಿಸಿ ಫಲಿತಾಂಶವನ್ನು ಪರಿಶೀಲಿಸಿ ಮತ್ತು ಡೌನ್‌ಲೋಡ್ ಮಾಡಿಟ್ಟುಕೊಳ್ಳಿ

ಯಶಸ್‌ಗೌಡ ಟಾಪರ್ ಆಗಲು ಶ್ರಮ ಹೇಗಿತ್ತು?

     ನಾನು ಟಾಪರ್‌ ಆಗ್ತೀನಿ ಎನ್ನುವ ನಂಬಿಕೆಯಿತ್ತು. ಇನ್ನಿ ನಿರ್ಮಲಾನಂದ ಸ್ವಾಮೀಜಿ ಆಶೀರ್ವಾದ, ಮನೆಯವರ ಆಶೀರ್ವಾದ ಮತ್ತು ಪ್ರೋತ್ಸಾಹದಿಂದ ಈ ಫಲಿತಾಂಶ ಪಡೆಯಲು ಸಾಧ್ಯವಾಗಿದೆ. ಹಾರ್ಡ್‌ವರ್ಕ್‌ ಜೊತೆಗೆ ಸ್ಮಾರ್ಟ್‌ ವರ್ಕ್‌ ಕೂಡ ಮಾಡಿದ್ದೆನು. ಶಿಕ್ಷಕರಿಂದ 6.30ರವರೆಗೆ ಡೌಟ್‌ ಕೇಳಿ ಪರಿಹರಿಸಿಕೊಳ್ಳುತ್ತಿದ್ದೆನು. ಮನೆಯಲ್ಲಿಯೂ ಕೂಡ ಶ್ರಮವಹಿಸಿ ಓದುತ್ತಿದ್ದೆನು. ಮುಂದೆ ನಾನು ಇಂಜಿನಿಯರ್‌ ಆಗಬೇಕು ಎಂದುಕೊಂಡಿದ್ದೇನೆ ಎಂದು ಎಸ್‌ಎಸ್‌ಎಲ್‌ಸಿ ಟಾಪರ್‌ ಯಶಸ್‌ಗೌಡ ತಿಳಿಸಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap