ಬೆಂಗಳೂರು
ಬೆಂಗಳೂರಿನಲ್ಲಿ ಸರ್ಕಾರ ಸರ್ವರಿಗೂ ಆರೋಗ್ಯ ವ್ಯವಸ್ಥೆ ತಲುಪಿಸಲೆಂದು ತೆರೆದ ನಮ್ಮ ಕ್ಲಿನಿಕ್‌ಗಳಲ್ಲಿ ಈಗ ಸಿಬ್ಬಂದಿ ಕೊರತೆ ರಾರಾಜಿಸುತ್ತಿವೆ . ಸಂಪೂರ್ಣ ಸಿದ್ಧತೆಯಿಂದ ಕ್ಲಿನಿಕ್ ಸಾರ್ವಜನಿಕರಿಗಾಗಿ ತೆರೆಯಲಾಗಿದೆ ಎಂದು ಹೇಳಿದ್ದರೂ ಕೂಡ ಹಲವು ಕ್ಲಿನಿಕ್‌ಗಳು ಸಾಕಷ್ಟು ಸಿಬ್ಬಂದಿ ಕೊರತೆ ಸೇರಿದಂತೆ ಕೆಲವು ಸಮಸ್ಯೆಗಳಿಂದ ಪರದಾಡುತ್ತಿವೆ.
ನಮ್ಮ ಚಿಕಿತ್ಸಾಲಯಗಳಲ್ಲಿ ಚಿಕಿತ್ಸೆಗಾಗಿ ಸಾಕಷ್ಟು ಮಂದಿ ಬರುತ್ತಿದ್ದು, ಇಲ್ಲಿ ಅಗತ್ಯದಷ್ಟು ಸಿಬ್ಬಂದಿಯನ್ನು ನೇಮಿಸಿಲ್ಲ, ಇದರಿಂದ ಕೆಲಸ ಮಾಡಲು ಸಾಕಷ್ಟು ತೊಂದರೆಯಾಗಿದೆ ಎಂದು ವೈದ್ಯಾಧಿಕಾರಿಗಳು ತಮ್ಮ ಅಳಲನ್ನು ತೋರಿಕೊಂಡಿದ್ದಾರೆ. ಇನ್ನು ಕೆಲವೆಡೆ ಸ್ಟಾಫ್ ನರ್ಸ್‌ಗಳು ಮತ್ತು ಲ್ಯಾಬ್ ಟೆಕ್ನಿಷಿಯನ್ಸ್‌ಗಳು ಬಂದಿಲ್ಲ.
ಶಾಂತಲಾ ನಗರದ ನಮ್ಮ ಕ್ಲಿನಿಕ್‌ನ ವೈದ್ಯಾಧಿಕಾರಿಯೊಬ್ಬರು, ತಮ್ಮ ಕ್ಲಿನಿಕ್‌ಗೆ ಇನ್ನೂ ಸ್ಟಾಫ್ ನರ್ಸ್ ಇಲ್ಲ ಎಂದಿದ್ದಾರೆ. ಜೀವನ್ ಭೀಮಾ ನಗರದಲ್ಲಿರುವ ಕ್ಲಿನಿಕ್‌ನ ಮತ್ತೊಬ್ಬ ವೈದ್ಯಾಧಿಕಾರಿ, ಆವರಣವನ್ನು ಸ್ವಚ್ಛವಾಗಿಡಲು ಗ್ರೂಪ್ ಡಿ ಉದ್ಯೋಗಿಯನ್ನು ನೇಮಿಸಲಾಗಿಲ್ಲ ಇದರಿಂದ ಸ್ವಚ್ಛತೆ ಮಾಯವಾಗಿದೆ ಎಂದು ದೂರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
