ಬೆಂಗಳೂರು:
ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಕಂಪನಿಯ 31 ಮಿಲಿಯನ್‌ಗೂ ಹೆಚ್ಚು ಗ್ರಾಹಕರ ವೈಯಕ್ತಿಕ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಡೇಟಾವನ್ನು 1.50 ಲಕ್ಷ ಡಾಲರ್ ಗೆ ಮಾರಾಟಕ್ಕೆ ಲಭ್ಯವಿರುವುದಾಗಿ ಹ್ಯಾಕರ್ ಒಬ್ಬ ಹೇಳಿಕೊಂಡಿದ್ದಾನೆ.
xenZen ಎಂದು ಗುರುತಿಸಲಾದ ಹ್ಯಾಕರ್ ಗ್ರಾಹಕರ ಜನ್ಮ ದಿನಾಂಕ, ಫೋನ್ ಸಂಖ್ಯೆ, ಪ್ಯಾನ್ ಕಾರ್ಡ್ ಸೇರಿದಂತೆ ಇತರ ವಿವರಗಳನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದರಿಂದ ವಿಮಾ ಕಂಪನಿಯ ಗ್ರಾಹಕರು ಆಘಾತಕ್ಕೊಳಗಾಗಿದ್ದಾರೆ. . ಎಲ್ಲಾ ಸೇವೆಗಳು ಅಡ್ಡಿಯಿಲ್ಲದೆ ಮುಂದುವರಿಯುತ್ತವೆ ಎಂದು ಸ್ಪಷ್ಪಪಡಿಸುತ್ತೇವೆ. ಸೈಬರ್ ಭದ್ರತೆ ತಜ್ಞರ ನೇತೃತ್ವದಲ್ಲಿ ಸಂಪೂರ್ಣ ಮತ್ತು ಕಠಿಣವಾದ ವಿಧಿವಿಜ್ಞಾನ ತನಿಖೆ ನಡೆಯುತ್ತಿದೆ.ತನಿಖೆಯ ಪ್ರತಿಯೊಂದು ಹಂತದಲ್ಲೂ ಸರ್ಕಾರ ಮತ್ತು ನಿಯಂತ್ರಕ ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಕಂಪನಿ ಹೇಳಿದೆ.
ಮದ್ರಾಸ್ ಹೈಕೋರ್ಟ್ ಸಂಪರ್ಕಿಸಿದ್ದು, ಸಂಬಂಧಿತ ಮಾಹಿತಿಗೆ ಪ್ರವೇಶವನ್ನು ನಿಷ್ಕ್ರಿಯಗೊಳಿಸಲು ಕೆಲವು ಮೂರನೇ ವ್ಯಕ್ತಿಗಳು ಸೇರಿದಂತೆ ಎಲ್ಲರಿಗೂ ನಿರ್ದೇಶನ ನೀಡಿದೆ. ನ್ಯಾಯಾಲಯದ ಆದೇಶವನ್ನು ಶ್ರದ್ದೆಯಿಂದ ಪಾಲಿಸುತ್ತಿದ್ದೇವೆ ಎಂದು ಕಂಪನಿ ತಿಳಿಸಿದೆ.
