ದ್ವಿತೀಯ ಪಿಯುಸಿ: ದಾಖಲೆಯ ಶೇ.86.48 ಫಲಿತಾಂಶ

ಹೊಸಬರು ಪುನರಾವರ್ತಿತ, ಖಾಸಗಿ ಅಭ್ಯರ್ಥಿಗಳು ಸೇರಿ ಒಟ್ಟು ಶೇ.81.58 ಫಲಿತಾಂಶ ದಾಖಲು
ರಾಜ್ಯದ ಶೈಕ್ಷಣಿಕ ಪ್ರಗತಿಗೆ ಫಲಿತಾಂಶ ಮುನ್ನುಡಿ: ಸಚಿವ ಮಧುಬಂಗಾರಪ್ಪ ಶ್ಲಾಘನೆ


ಬೆಂಗಳೂರು

2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಗುರುವಾರ ಬಿಡುಗಡೆ ಆಗಿದ್ದು, ಈ ವರ್ಷ ಹೊಸದಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಎದುರಿಸಿದ 6,32,200 ವಿದ್ಯಾರ್ಥಿಗಳ ಪೈಕಿ 5,46,698 ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದರೊಂದಿಗೆ ದಾಖಲೆಯ ಶೇ.86.48ರಷ್ಟು ಫಲಿತಾಂಶ ದಾಖಲಾಗಿದೆ. ಇದು ಕಳೆದ ಬಾರಿಯ ಶೇ.73.45ರಷ್ಟು ಫಲಿತಾಂಶಕ್ಕಿ0ತ ಶೇ.13.03ರಷ್ಟು ಅಧಿಕವಾಗಿದ್ದು, ರಾಜ್ಯದ ಶೈಕ್ಷಣಿಕ ಪ್ರಗತಿಗೆ ಫಲಿತಾಂಶ ಮುನ್ನುಡಿಯೆಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಬಣ್ಣಿಸಿದ್ದಾರೆ.
ಒಟ್ಟಾರೆ ಹೊಸಬರು, ಪುನರಾವರ್ತಿರು, ಖಾಸಗಿಯವರು ಒಟ್ಟು ಶೇ.81.58ರಷ್ಟು ಫಲಿತಾಂಶ ದಾಖಲಾಗಿದ್ದು, ಕಳೆದ ಬಾರಿ ಪಡೆದಿದ್ದ ಶೇ.69.16 ಫಲಿತಾಂಶಕ್ಕಿAತ ಶೇ 12.42ರಷ್ಟು ಪ್ರತಿಶತ ಫಲಿತಾಂಶದಲ್ಲಿ ಏರಿಕೆಯಾಗಿದೆ. ಪುನರಾವರ್ತಿತ ಅಭ್ಯರ್ಥಿಗಳ ಪೈಕಿ 14,527 ಮಂದಿ(ಶೇ.29) ತೇರ್ಗಡೆಯಾಗಿದ್ದು, ಖಾಸಗಿಯಾಗಿ ಪರೀಕ್ಷೆ ತೆಗೆದುಕೊಂಡ 12,248 ವಿದ್ಯಾರ್ಥಿಗಳ ಪೈಕಿ 5,383 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಶೇ.43.95 ಪ್ರತಿಶತ ಫಲಿತಾಂಶ ದಾಖಲಾಗಿದೆ.
ರಾಜ್ಯದಲ್ಲಿ ಜಿಲ್ಲಾವಾರು ಫಲಿತಾಂಶದ ಪೈಕಿ ಉಡುಪಿ ಶೇ.96.39 ಪ್ರತಿಶತ ಫಲಿತಾಂಶದೊAದಿಗೆ ಕಳೆದ ಬಾರಿಯ ಅಗ್ರಸ್ಥಾನವನ್ನು ಈ ಬಾರಿಯೂ ಮುಂದುವರಿಸಿದ್ದು, ಎರಡನೇ ಸ್ಥಾನದಲ್ಲಿ ದಕ್ಷಿಣ ಕನ್ನಡ ಶೇ 93.57%, ತೃತೀಯ ಸ್ಥಾನದಲ್ಲಿ ಶೇ.92.34ರÀಷ್ಟು ಫಲಿತಾಂಶದೊAದಿಗೆ ಕೊಡಗು ಜಿಲ್ಲೆಯಿದ್ದು, ಯಾದಗಿರಿ ಶೇ.71.21ರಷ್ಟು ಫಲಿತಾಂಶದೊAದಿಗೆ ಕಡೆಯ ಸ್ಥಾನದಲ್ಲಿದೆ.
ಸುದ್ದಿಗೋಷ್ಠಿಯಲ್ಲಿ ಸಚಿವರ ಮಾಹಿತಿ: ನಗರ ವಿದ್ಯಾರ್ಥಿಗಳು ಮೇಲುಗೈಳ ಈ ಬಾರಿ ನಗರ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಅಂದರೆ 74.55% ಗ್ರಾಮೀಣ ವಿದ್ಯಾರ್ಥಿಗಳು 69.33% ರಷ್ಟು ತೇರ್ಗಡೆಯಾಗಿದ್ದಾರೆ. ಈ ಬಾರಿ ಕಲ್ಯಾಣ ಕರ್ನಾಟಕ ವಿದ್ಯಾರ್ಥಿಗಳು 78.98% ರಷ್ಟು ತೇರ್ಗಡೆಯಾಗಿದ್ದು, ಕಲ್ಯಾಣ ಕರ್ನಾಟಕೇತರ ಪ್ರದೇಶದ ವಿದ್ಯಾರ್ಥಿಗಳು 87.99% ರಷ್ಟು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಕಲ್ಯಾಣ ಕರ್ನಾಟಕ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ಧಾರೆ ಎಂದು ಸುದ್ದಿಗೋಷ್ಠಿಯಲ್ಲಿ ಶಾಲಾ ಶಿಕ್ಷಣ ಸಚಿವ ಮಧುಬಂಗಾರಪ್ಪ ತಿಳಿಸಿದರು.
ಇದೇ ಮೊದಲ ಬಾರಿಗೆ ಮಕ್ಕಳಿಗೆ ನೇರವಾಗಿ ಫಲಿತಾಂಶ ಕೊಡುವ ಉದ್ದೇಶದಿಂದ ವೆಬ್ ಸೈಟ್ ನಲ್ಲಿ ಮೊದಲು ಪ್ರಕಟಿಸಲಾಗಿದೆ. ಡಿಜಿಟಲ್ ಆಗಿ ಫಲಿತಾಂಶ ನೀಡುವ ಕೆಲಸ ನಡೆಯುತ್ತಿದ್ದ ಕಾರಣ ಫಲಿತಾಂಶ ಪ್ರಕಟಣೆ ವಿಳಂಬವಾಯಿತು ಎಂದ ಸಚಿವರು ಸಮಾಜಾಯಿಷಿ ನೀಡಿದರು.
ಈ ವರ್ಷ 7,10,363 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ, 3,35,138 ಮಂದಿ ಬಾಲಕರು ಮತ್ತು 3,31,359 ಬಾಲಕಿಯರು. 6.10 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಾಲಕರು ಶೇ.83.65 ಮತ್ತು ಶೇ.88.70 ಬಾಲಕಿಯರು ಉತ್ತೀರ್ಣರಾಗಿದ್ದಾರೆ. 2024 ಮತ್ತು 2025ರ ಫಲಿತಾಂಶಕ್ಕೆ ಹೋಲಿಸಿದರೆ, ಇದು ಅತ್ಯುತ್ತಮ ಫಲಿತಾಂಶವೇ ಆಗಿದೆ. 2024ರಲ್ಲಿ ಒಟ್ಟು 6,98,478 ವಿದ್ಯಾರ್ಥಿಗಳು ನೋಂದಾಯಿಸಿಕೊAಡಿದ್ದರು. 6,81,079 ವಿದ್ಯಾರ್ಥಿಗಳು ಪರೀಕ್ಷೆ ಪಡೆದಿದ್ದರು. 5,52,690 ಮಂದಿ ಉತ್ತೀರ್ಣರಾಗಿದ್ದರು. ಒಟ್ಟು ಫಲಿತಾಂಶವು 2023ಕ್ಕಿಂತ 6.48% ಹೆಚ್ಚಳದೊಂದಿಗೆ 81.15%ಗೆ ಏರಿಕೆಯಾಗಿತ್ತು. ಆದರೆ, ಈ ಫಲಿತಾಂಶದ ಹಿಂದೆ ಪರೀಕ್ಷೆಗಳು ಪಾರದರ್ಶಕವಾಗಿ ಮತ್ತು ಕಟ್ಟುನಿಟ್ಟಾಗಿ ನಡೆಯದೇ ಇರುವುದು ಹಾಗೂ ಗ್ರೇಸ್ ಅಂಕಗಳು ಪಾತ್ರ ಹೆಚ್ಚಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ತಜ್ಞರು ಅಭಿಪ್ರಾಯಪಟ್ಟಿದ್ದರು.
ಆದ್ದರಿಂದ, ರಾಜ್ಯ ಸರ್ಕಾರವು ಪರೀಕ್ಷೆಯ ಪವಿತ್ರತೆಯನ್ನು ಕಾಪಾಡಲು, ಮಾಲ್ಪಾçಕ್ಟಿಸ್ ತಡೆಯಲು ಹಾಗೂ ವಿದ್ಯಾರ್ಥಿಗಳ ನಿಜವಾದ ಕಲಿಕೆಯನ್ನು ಪ್ರೋತ್ಸಾಹಿಸಲು ಹಲವು ಕ್ರಮಗಳು ಮತ್ತು ಸುಧಾರಣೆಗಳನ್ನು ತಂದಿತು. ಶಿಕ್ಷಣ ಕ್ಷೇತ್ರದಲ್ಲಿ ಅದರಲ್ಲೂ ಶಾಲಾ ಮತ್ತು ಕಾಲೇಜುಗಳ ಶೈಕ್ಷಣಿಕ ಪರೀಕ್ಷೆಗಳಲ್ಲಿ ನಾನಾ ಬದಲಾವಣೆಗಳನ್ನು ಮಾಡಿತು ಎಂದು ವಿವರಿಸಿದರು.
ಹಿಂದಿನ ವರ್ಷದ ಫಲಿತಾಂಶದ ವಿಶ್ಲೇಷಣೆ:
2025ರ ಪರೀಕ್ಷೆಗಳ ವೇಳೆ, ಪರೀಕ್ಷಾ ಹಾಲ್‌ಗಳ ಮೇಲೆ ಕಟ್ಟೆಚ್ಚರ ವಹಿಸಲಾಗಿತ್ತು. ಪ್ರತಿ ಮೂಲೆಯನ್ನು ವೆಬ್ಕಾ÷್ಯಮ್ ಮೂಲಕ ನೇರ ಪ್ರಸಾರ ಮಾಡಲಾಗಿತ್ತು. ಈ ಕ್ರಮ ಯಾವ ಮಟ್ಟಿಗಿತ್ತೆಂದರೆ, ಪ್ರಾಯೋಗಿಕ ಪರೀಕ್ಷೆಗಳನ್ನೂ ವೆಬ್-ಸ್ಟಿçÃಮಿಂಗ್ ಮಾಡಲಾಗಿತ್ತು. ಪರಿಣಾಮ, ಮಾಲ್ಪಾçಕ್ಟಿಸ್ (ಕಾಪಿ, ಅಕ್ರಮ) ಸಂಪೂರ್ಣವಾಗಿ ತಡೆಯಲಾಯಿತು.
ಜತೆಗೆ, ಹಿಂದಿನ ವರ್ಷಗಳಲ್ಲಿ ನೀಡಲಾಗಿದ್ದ ಗ್ರೇಸ್ ಮಾರ್ಕ್್ಸ ಅಥವಾ ಸಡಿಲತೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಯಿತು. 2025ರಲ್ಲಿ, ಕೆಲವು ಬಾರ್ಡರ್ಲೆÊನ್ ವಿದ್ಯಾರ್ಥಿಗಳಿಗೆ ನೀಡಲಾದ ಸಣ್ಣ ಸಡಿಲಿಕೆಗಳ ಹೊರತಾಗಿ, ಯಾವುದೇ ಗ್ರೇಸ್ ಮಾರ್ಕ್್ಸ ನೀಡಲಿಲ್ಲ. ಮೌಲ್ಯಮಾಪನವನ್ನೂ ಹೆಚ್ಚು ನಿಖರತೆ ಮತ್ತು ಕಟ್ಟುನಿಟ್ಟಾಗಿ ನಡೆಸಲಾಯಿತು. ಆನ್ಲೆöÊನ್ ಮಾರ್ಕ್ ಎಂಟ್ರಿ ವ್ಯವಸ್ಥೆ ಬಲಪಡಿಸಲಾಯಿತು. ಆದಾಗ್ಯೂ, ಮುಖ್ಯ ಪರೀಕ್ಷೆಯಲ್ಲಿ ನಪಾಸು ಆದವರಿಗೆ ಮೂರು ಹಂತಗಳಲ್ಲಿ ಪೂರಕ ಪರೀಕ್ಷೆಗಳನ್ನು ನಡೆಸಲು ಅವಕಾಶ ನೀಡಲಾಯಿತು. ಅದೂ, ಯಾವುದೇ ಪರೀಕ್ಷಾ ಶುಲ್ಕವಿಲ್ಲದೆಯೇ, ಅನುತ್ತೀರ್ಣರಾಗಿದ್ದ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಸರ್ಕಾರವು ಅವಕಾಶ ಮಾಡಿಕೊಟ್ಟಿತು. ಕಟ್ಟುನಿಟ್ಟಿನ ನಿಗಾ ಮತ್ತು ಕ್ರಮಗಳ ಫಲವಾಗಿ, 2025ರ ಫಲಿತಾಂಶವು ಗಮನಾರ್ಹವಾಗಿ ಕುಸಿಯಿತು. 2025ರಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದ ಒಟ್ಟು 6,37,805 ವಿದ್ಯಾರ್ಥಿಗಳಲ್ಲಿ 4,68,439 ಮಂದಿ ಮಾತ್ರವೇ ಉತ್ತೀರ್ಣರಾದರು. ಫಲಿತಾಂಶವು 73.45%ಗೆ ಕುಸಿಯಿತು. 2024ರ 81.15%ಗೆ ಹೋಲಿಸಿದರೆ, ಬರೋಬ್ಬರಿ 8% ಕುಸಿತ ಕಂಡಿತು. ಆದರೂ, ಸರ್ಕಾರ ಮತ್ತು ಶಿಕ್ಷಣ ಇಲಾಖೆ ತಮ್ಮ ಕ್ರಮಗಳು ಮತ್ತು ಪಾರದರ್ಶಕತೆಯಲ್ಲಿ ರಾಜಿ ಇಲ್ಲವೆಂದು ಹೇಳಿತು. ಫಲಿತಾಂಶ ಕಡಿಮೆಯಾದರೂ ಪರೀಕ್ಷೆಯ ಪವಿತ್ರತೆ ಕಾಪಾಡಲಾಗಿದೆ. ಇದು ವಿದ್ಯಾರ್ಥಿಗಳ ನಿಜವಾದ ಕಾರ್ಯಕ್ಷಮತೆಯನ್ನು ಪ್ರತಿಬಿಂಬಿಸುತ್ತದೆ. ಪರೀಕ್ಷೆಗಳನ್ನು ಸಡಿಲತೆಯಿಲ್ಲದೆ, ಪಾರದರ್ಶಕತೆಯೊಂದಿಗೆ ನಡೆಸಿದಾಗ ವಿದ್ಯಾರ್ಥಿಗಳ ನಿಜವಾದ ಪ್ರಗತಿ ಕಾಣುತ್ತದೆ ಎಂದು ಶಿಕ್ಷಣ ಸಚಿವರು ಹೇಳಿದ್ದರು.
ಇಲಾಖೆಯ ಕ್ರಮಗಳು ಮತ್ತು ಬದಲಾವಣೆಗಳು ದೀರ್ಘಕಾಲೀನವಾಗಿ ಗುಣಮಟ್ಟ ಸುಧಾರಿಸಲು ಸಹಾಯಕವಾಗುತ್ತವೆ ಎಂದ ಸರ್ಕಾರವು, ಈ ಕ್ರಮಗಳ ಜೊತೆಗೆ, ಶಿಕ್ಷಣಿಕ ಕ್ಷೇತ್ರಗಳಲ್ಲಿನ ಸೌಲಭ್ಯಗಳ ಸುಧಾರಣೆ ಅಗತ್ಯವಿದೆ ಎಂಬುದನ್ನು ಒಪ್ಪಿಕೊಂಡಿತು. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗಳನ್ನು ಬರೆಯಲು ಅವಕಾಶಗಳನ್ನು ನೀಡಿತು. 2025-26ರಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಮತ್ತಷ್ಟು ಸುಧಾರಣೆಗಳನ್ನು ತಂದಿತು. ಈ ವರ್ಷ, ಉತ್ತೀರ್ಣರಾಗಲು ಅಗತ್ಯವಿರುವ ಕನಿಷ್ಠ ಅಂಕಗಳಲ್ಲಿ ಕೆಲವು ಬದಲಾವಣೆಗಳನ್ನು ತಂದಿತು. 2025-26ರ ಶೈಕ್ಷಣಿಕ ವರ್ಷದಿಂದ ಅನ್ವಯವಾಗುವಂತೆ ಉತ್ತೀರ್ಣತೆಯ ಕಟ್‌ಆಫ್‌ಅನ್ನು ಪ್ರತಿ ವಿಷಯದಲ್ಲಿ ಕನಿಷ್ಠ 30% ಅಂಕಗಳೊAದಿಗೆ ಒಟ್ಟು 33% ಅಂಕಗಳಿಗೆ ಇಳಿಸಿತು.
ಇದೀಗ, 2026ರಲ್ಲಿ ಸರ್ಕಾರವು ತನ್ನ ಕಟ್ಟುನಿಟ್ಟಿನ ಕ್ರಮಗಳು ಮತ್ತು ಸುಧಾರಣೆಗಳೊಂದಿಗೆ ಅತ್ಯುತ್ತಮ ಫಲಿತಾಂಶ ಬರುವಂತೆ ಮಾಡಿದೆ. ಪರೀಕ್ಷೆ ಮತ್ತು ಮೌಲ್ಯಮಾನದಲ್ಲಿ ಪ್ರಮುಖ ಬದಲಾವಣೆಗಳಾದರೂ, ಎರಡೇ ವರ್ಷದಲ್ಲಿ ಸರ್ಕಾರದ ಕ್ರಮಗಳು ಫಲ ನೀಡಿವೆ. ಪ್ರಸ್ತುತ 86% ಫಲಿತಾಂಶ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, 13%ರಷ್ಟು ಹೆಚ್ಚಾಗಿದೆ ಎಂದು ಸಚಿವರು ವಿವರಿಸಿದರು.
ಈ ಫಲಿತಾಂಶವು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರಲ್ಲಿ ಹೊಸ ಉತ್ಸಾಹವನ್ನು ಮೂಡಿಸಿದೆ. ಬಾಲಕಿಯರು ಈ ಬಾರಿಯೂ ಬಾಲಕರಿಗಿಂತ ಉತ್ತಮ ಪ್ರದರ್ಶನ ನೀಡಿ, ರಾಜ್ಯದ ಶೈಕ್ಷಣಿಕ ಪ್ರಗತಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಫಲಿತಾಂಶದ ಹೆಚ್ಚಳವು ಕೇವಲ ಸಂಖ್ಯೆಯಲ್ಲಿನ ಏರಿಕೆ ಮಾತ್ರವಲ್ಲ, ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಗುಣಾತ್ಮಕ ಬದಲಾವಣೆಯ ಸಂಕೇತವೂ ಆಗಿದೆ ಎಂದು ಮಧು ಬಂಗಾರಪ್ಪ ಹೇಳಿದರು.

ಮೂವರು ವಿದ್ಯಾರ್ಥಿನಿಯರು ಕಲಾವಿಭಾಗದ ಟಾಪರ್ಸ್
ಫಲಿತಾಂಶದಲ್ಲಿ(ಹೊಸಬರು) ಕಲಾ ನಿಖಾಯದಲ್ಲಿ ಪರೀಕ್ಷೆ ತೆಗೆದುಕೊಂಡ 1,34,921 ವಿದ್ಯಾರ್ಥಿಗಳ ಪೈಕಿ 98,310 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಶೇ.72.86 ಪ್ರತಿಶತ ಫಲಿತಾಂಶ ದಾಖಲಾಗಿದ್ದು, ಬಳ್ಳಾರಿಯ ಇಂದು ಪಿಯು ಕಾಲೇಜುನ ಅರ್ಚನಾ ಡಿ.ಎಂ, ಸಂಗೀತ ಹಾಗೂ ಕಲ್ಬುರ್ಗಿ ವಿಜಿಪಿಯು ಕಾಲೇಜಿನ ಸೃಷ್ಟಿ ಕ್ರಮವಾಗಿ 600ಕ್ಕೆ 598ಅಂಕಗಳಿಕೆಗೆ ಟಾಪರ್ ಸ್ಥಾನವನ್ನು ಸಮನಾಗಿ ಹಂಚಿಕೊಡಿದ್ದಾರೆ.
ವಾಣಿಜ್ಯ ವಿಭಾಗದಲ್ಲೂ ಹೆಣ್ಣುಮಕ್ಕಳೇ ಟಾಪರ್ಸ್
ವಾಣಿಜ್ಯ ವಿಭಾಗದ ಫಲಿತಾಂಶದಲ್ಲಿ 600ಕ್ಕೆ 600 ಪೂರ್ಣಾಂಕಗಳಿಸುವ ಮೂಲಕ ಇಬ್ಬರು ಹೆಣ್ಣುಮಕ್ಕಳೇ ಟಾಪರ್‌ಗಳಾಗಿ ಹೊರಹೊಮ್ಮಿದ್ದು, ಬೆಂಗಳೂರಿನ ಮಹಾವೀರ ಜೈನ್ ಪಿಯು ಕಾಲೇಜಿನ ಅದಿತಿ ಎ ಬಾಪು , ಮಂಗಳೂರಿನ ಆಳ್ವಾಸ್ ಪಿಯು ಕಾಲೇಜಿನ ದಿಶಾ ತಲಾ 600 ಅಂಕಗಳಿಸಿ ಟಾಪರ್‌ಆಗಿ ಹೊರಹೊಮ್ಮಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 13 ಮಂದಿ ಟಾಪರ್ಸ್
ವಿಜ್ಞಾನ ವಿಭಾಗದಲ್ಲಿ 600ಕ್ಕೆ 598 ಅಂಕಗಳನ್ನು ಒಟ್ಟು 13 ವಿದ್ಯಾರ್ಥಿಗಳು ತಮ್ಮದಾಗಿಸಿಕೊಳ್ಳುವ ಮೂಲಕ ವಿಜ್ಞಾನ ವಿಭಾಗದಲ್ಲಿ ರಾಜ್ಯ ಟಾಪರ್‌ಗಳಾಗಿ ಹೊರಹೊಮ್ಮಿದ್ದು, ಉಡುಪಿ, ಬೆಂಗಳೂರು, ದಕ್ಷಿಣ ಕನ್ನಡ, ಉತ್ತರಕನ್ನಡ, ಬೆಳಗಾವಿ ಜಿಲ್ಲೆಯ ವಿದ್ಯಾರ್ಥಿಗಳಾದ ಪ್ರಿನ್ಸಿಲಿಯಾ ಕಾರ್ಡೋಜಾ, ಅಬಿರಾಮ್ ವಿ ಭಟ್, ಏಂಜಲ್ ತಿವಾರಿ, ಅಂಕಿತ್ ಭೀಮಪ್ಪ ಕಾರಟಗಿ, ಧನುಷ್ ಗುಟ್ಟು, ಮೀನಾಕ್ಷಿ ಉನ್ನಿನಾಥನ್, ನಂದನ್ ನಾಯಕ್, ರಕ್ಷಿತಾ ಮಂಜುನಾಥ್, ರಶ್ಮಿ, ಸಾಯಿರಾಘವ್‌ವಿಶ್ವೇಶ, ಸಮನ್ಯು ಶೆಟ್ಟಿ, ಯು ಶ್ರಾವಣಿ ಹಾಗೂ ವೈಭವಿ ಎಸ್.ರ‍್ಕೇರಾ ಅಗ್ರಸ್ಥಾನವನ್ನು ಸಮನಾಗಿ ಹಂಚಿಕೊAಡಿದ್ದಾರೆ.

ಕನ್ನಡದಲ್ಲಿ 100ಕ್ಕೆ 100 ಅಂಕಗಳಿಸಿದ 5,228 ವಿದ್ಯಾರ್ಥಿಗಳು
ಈ ವರ್ಷದ ಪಿಯು ಫಲಿತಾಂಶದಲ್ಲಿ ಕನ್ನಡದಲ್ಲಿ 100ಕ್ಕೆ 100 ಅಂಕಗಳಿಸಿದವರು 5,228 ವಿದ್ಯಾರ್ಥಿಗಳು. ಹಾಗೆಯೇ ಇಂಗ್ಲಿಷ್ ವಿಷಯದಲ್ಲಿ 27 ವಿದ್ಯಾರ್ಥಿಗಳು 100ಕ್ಕೆ 100 ಅಂಕವನ್ನು, ಸಂಖ್ಯಾಶಾಸ್ತçದಲ್ಲಿ 2699 ವಿದ್ಯಾರ್ಥಿಗಳು 100ಕ್ಕೆ 100 ಅಂಕವನ್ನು, ಭೌತಶಾಸ್ತçದಲ್ಲಿ 3224 ವಿದ್ಯಾರ್ಥಿಗಳು, ಇತಿಹಾಸದಲ್ಲಿ 965 ವಿದ್ಯಾರ್ಥಿಗಳು, ರಸಾಯನಶಾಸ್ತçದಲ್ಲಿ 472 ವಿದ್ಯಾರ್ಥಿಗಳು, ಗಣಕ ವಿಜ್ಞಾನದಲ್ಲಿ 6232 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.

ಫಲಿತಾಂಶದ ಪ್ರಮುಖಾಂಶ
ಕಳೆದ ಸಾಲಿಗಿಂತ ಶೇ.13.03% ಫಲಿತಾಂಶ ಅಧಿಕ
2024 ಮತ್ತು 2025ಕ್ಕೆ ಹೋಲಿಸಿದರೆ ಅತ್ಯುತ್ತಮ ಫಲಿತಾಂಶ
ವಿಜ್ಞಾನ ವಿಭಾಗದಲ್ಲಿ 13, ವಾಣಿಜ್ಯದಲ್ಲಿ ಇಬ್ಬರು, ಕಲಾವಿಭಾಗದಲ್ಲಿ ಮೂವರು ವಿದ್ಯಾರ್ಥಿಗಳು ರಾಜ್ಯಕ್ಕೆ ಟಾಪರ್ಸ್
409 ಕಾಲೇಜುಗಳು ಶೇ.100, 47 ಕಾಲೇಜುಗಳು ಶೂನ್ಯ ಫಲಿತಾಂಶ
2,32,928 ಬಾಲಕರು, 3,13,170 ಬಾಲಕಿಯರು ಉತ್ತೀರ್ಣ
ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಏ.10 ರಿಂದ 17ರವರೆಗೆ ಪರೀಕ್ಷೆ 2 ಬರೆಯಲು ಅವಕಾಶ.

1,70,529ವಿದ್ಯಾರ್ಥಿಗಳಿಂದ ಶೇಕಡ.85 ಕ್ಕಿಂತ ಹೆಚ್ಚು ಅಂಕ ಗಳಿಕೆ
ಪರೀಕ್ಷೆ ಬರೆದ ಒಟ್ಟಾರೆ ವಿದ್ಯಾರ್ಥಿಗಳ ಪೈಕಿ 1,00,571 ವಿದ್ಯಾರ್ಥಿಗಳು ಶೇಕಡ.85 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಹಾಗೆಯೇ ಪ್ರಥಮ ದರ್ಜೆಯಲ್ಲಿ 2,95,385 ವಿದ್ಯಾರ್ಥಿಗಳು, ದ್ವಿತೀಯ ದರ್ಜೆಯಲ್ಲಿ 63,957 ವಿದ್ಯಾರ್ಥಿಗಳು, ತೃತೀಯ ದರ್ಜೆಯಲ್ಲಿ 16,827 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

Recent Articles

spot_img

Related Stories

Share via
Copy link