ನಾಡಗೀತೆ ಸಮಯಕ್ಕೆ ಬಿತ್ತು ಕತ್ತರಿ..!?

ಬೆಂಗಳೂರು:

      ರಾಷ್ಟ್ರಕವಿ ಕುವೆಂಪು ರಚಿತ ಜೈ ಭಾರತ ಜನನಿಯ ತನುಜಾತೆ ನಾಡಗೀತೆಯನ್ನು ಯಾವುದೇ ಧಾಟಿಯಲ್ಲಿ ಹಾಡಿದರೂ ಎರಡೂವರೆ ನಿಮಿಷದಲ್ಲಿ ಮುಗಿಸಬೇಕು ಎಂಬ ಪ್ರಸ್ತಾವನೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಿದೆ.

       ಮನಸೋ ಇಚ್ಛೆ ಹಾಡುತಿದ್ದ ನಾಡಗೀತೆಗೆ 2.20ನಿಮಿಷ ಸಮಯ ನಿಗದಿ ಮಾಡಿ ಶಿಪಾರಸು ಮಾಡಲು ಕನ್ನಡ ಸಾಹಿತ್ಯ ಪರಿಷತ್‌ ನೇತೃತ್ವದಲ್ಲಿ ನಡೆದ ತಜ್ಞರ ಸಭೆ ಈ ನಿರ್ಧಾರ ತೆಗೆದುಕೊಂಡಿದೆ.

      ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬುಧವಾರ ಬೆಳಗ್ಗೆ ನಡೆದ ಸಭೆಯಲ್ಲಿ ನಾಡಗೀತೆ “ಜಯ ಭಾರತ ಜನನಿಯ ತನುಜಾತೆ’ ಯನ್ನು ಅಪಭ್ರಂಶವಿಲ್ಲದೆ, ಯಾವುದೇ ಪದಗಳಿಗೆ ಕತ್ತರಿ ಹಾಕದೆ ಎರಡೂವರೆ ನಿಮಿಷದಲ್ಲಿ ಹಾಡಬಹುದು ಎಂಬುದನ್ನು ಸಾಹಿತಿ, ಗಾಯಕರ ಹಾಗೂ ಹೋರಾಟಗಾರರ ಸಮ್ಮುಖದಲ್ಲಿ ಗಾಯಕರಿಂದ ಹಾಡಿಸಿ ನಿರ್ಧರಿಸಲಾಯಿತು.   

ಧಾಟಿ ಯಾವುದು:

      2003ರ ಜನವರಿ 7ರಂದು ಕುವೆಂಪು ರಚಿತ ಕವನವನ್ನು ನಾಡಗೀತೆಯಾಗಿ ಅಂಗೀಕರಿಸಿ ಸರ್ಕಾರ ಆದೇಶ ಹೊರಡಿಸಿತ್ತು. ನಂತರ ಹಿರಿಯ ಸಾಹಿತಿ ದಿ ಜಿಎಸ್ ಶಿವರುದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಸಂಗೀತ ನಿರ್ದೇಶಕ ಎಚ್‌ಕೆ ನಾರಾಯಣ, ವಸಂತ ಕನಕಾಪುರ, ಡಾ ಸಿದ್ದಲಿಂಗಯ್ಯ ಅವರ ಸಮಿತಿ ರಚಿಸಿ ಧಾಟಿ ಯಾವುದಿರಬೇಕು ಎಂಬುದರ ವರದಿ ನೀಡುವಂತೆ ಸರ್ಕಾರ ಸೂಚಿಸಿತ್ತು.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 
 

 

 

Recent Articles

spot_img

Related Stories

Share via
Copy link
Powered by Social Snap