PSI ನೇಮಕಾತಿ ರದ್ದು ಮಾಡಿದ ‘ರಾಜ್ಯ ಸರ್ಕಾರ’: ಹೆಚ್ಚಿದ ಆಕ್ರೋಶ, ವ್ಯಾಪಕ ಟೀಕೆ, ಇಂದಿನಿಂದ ಉಪವಾಸ ಸತ್ಯಾಗ್ರಹ

ಬೆಂಗಳೂರು:

ರಾಜ್ಯ ಸರ್ಕಾರದ ನಿದ್ದೆಕೆಡಿಸಿರುವ PSI ನೇಮಕ ಹಗರಣ ದಿನದಿಂದ ದಿನಕ್ಕೆ ಒಂದ ತಿರುವು ಪಡೆದುಕೊಳ್ಳುತ್ತಿದ್ದು, ನೇಮಕಾತಿ ಪ್ರಕ್ರಿಯೆಯನ್ನು ರದ್ದು ಮಾಡಿ ಮತ್ತೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ಈ ನಡುವೆ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ದ ಅಭ್ಯರ್ಥಿಗಳ ಸೇರಿದಂತೆ ವಿರೋಧ ಪಕ್ಷಗಳು ಟೀಕೆ ಮಾಡುತ್ತಿದ್ದು, ಸರ್ಕಾರದ ಕ್ರಮವನ್ನು ಖಂಡಿಸುತ್ತಿದ್ದಾರೆ. ಸರ್ಕಾರ ಯಾರದ್ದೂ ತಪ್ಪನ್ನು ನಮಗೆ ಶಿಕ್ಷೆ ನೀಡಲು ಮುಂದಾಗಿರುವುದು ನಮಗೆ ಬೇಸರ ತಂದಿದ್ದೆ, ಈ ನಿಟ್ಟಿನಲ್ಲಿ ಕಾನೂನು ಸಮರಕ್ಕೆ ಮುಂದಾಗಲಿದ್ದು, ಇದಲ್ಲದೇ ಸರ್ಕಾರದ ಕ್ರಮ ಖಂಡಿಸಿ ಶನಿವಾರದಿಂದ ಉಪವಾಸ ಸತ್ಯಾಗ್ರಹ ನಡೆಸಲು ಪ್ರಾಮಾಣಿಕ ವಿದ್ಯಾರ್ಥೀಗಳು ಮುಂದಾಗಿದ್ದಾರೆ.

ಇಂದಿನ ಪಂದ್ಯದಲ್ಲಿ (RCB) ಬೆಂಗಳೂರು – ಗುಜರಾತ್‌ (GT)ಮುಖಾಮುಖಿ

ಸರ್ಕಾರದ ಕ್ರಮಕ್ಕೆ ಮಾಜಿ‌ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಖಂಡಿಸಿದ್ದು, ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ. ಸರ್ಕಾರದ ನಿರ್ಧಾರವನ್ನು ಅವರು ವಿರೋಧ ವ್ಯಕ್ತಪಡಿಸಿದ್ದು, ಸರ್ಕಾರದ ನಿರ್ಧಾರಕ್ಕೆ ಸಂಬಂಧಪಟ್ಟಂತೆ ಸಿಎಂ ಜೊತೆಗೆ ಚರ್ಚೆ ನಡೆಸುವೆ ಅಂತ ಹೇಳಿದ್ದಾರೆ.

ಯಾರು ಅಕ್ರಮದಲ್ಲಿ ಭಾಗವಹಿಸಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳಿ, ಎಕ್ಸಾಂ ನಡೆಸಲು ಮುಂದಾರೆ, ಈಗ ವಿದ್ಯಾರ್ಥಿಗಳು ಯಾವೆಲ್ಲ ಸನ್ನಿವೇಶದಲ್ಲಿ ಇದ್ದರೋ ಗೊತ್ತಿಲ್ಲ, ಈ ನಿಟ್ಟಿನಲ್ಲಿ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ನಾಯ್ಯ ಒದಗಿಸುವಂತೆ ಅವರು ಹೇಳಿದ್ದಾರೆ.

ಕಲ್ಲಿದ್ದಲು ತುರ್ತು ಸಾಗಾಟಕ್ಕೆ ದೇಶಾದ್ಯಂತ 650 ಕ್ಕೂ ಹೆಚ್ಚು ಪ್ರಯಾಣಿಕರ ರೈಲುಗಳು ರದ್ದು..!

ಇವೆಲ್ಲದರ ನಡುವೆ ಪಿಎಸ್‌ಐ ಎಕ್ಸಾಂನಲ್ಲಿ ನಡೆದಿದೆ ಎನ್ನಲಾಗಿರುವ ಹಗರಣಕ್ಕೆ ಸಂಬಂಧಪಟ್ಟಂತೆ ಸದ್ಯ ಸಿಐಡಿ ಪೋಲಿಸರ ವಶದಲ್ಲಿರುವ ಪ್ರಮುಖ ಆರೋಪಿ ದಿವ್ಯ ಹಾರಂಗಿ ಸೇರಿದಂತೆ ಒಟ್ಟು 7 ಮಂದಿಯನ್ನು ಕಲಬುರಗಿ ಜಿಲ್ಲಾ ನ್ಯಾಯಾಲಯದ ಮೂರನೇ ಜೆಎಂಎಫ್‌ ನ್ಯಾಯಾಧೀಶರು ಸಿಐಡಿ ವಶಕ್ಕೆ ನೀಡಿ ಶುಕ್ರವಾರ ಆದೇಶಿಸಿದೆ.

ಅರ್ಚನ, ಸುನೀತ, ಕಾಳಿದಾಸ್‌, ಸುನೀತಾ ಪಾಟೀಲ್‌, ಸುರೇಶ್ ಕಾಟೇಗಾವ್‌, ಸದ್ದಾಂ, ದಿವ್ಯಹಾಗರಗಿ, ಆರೋಪಿಗಳನ್ನು ಸಿಐಡಿ ವಶಕ್ಕೆ ನೀಡಲು ನ್ಯಾಯಾಧೀಶರ ಬಳಿ ಸಿಐಡಿ ಪರ ವಕೀಲರು ಮನವಿ ಮಾಡಿಕೊಂಡಿದ್ದರು, ಅದರಂಥೆ ಅವರನ್ನು ವಶಕ್ಕೆ ನೀಡಲು ನ್ಯಾಯಾಧೀಶರು ಮಾನ್ಯ ಮಾಡಿದ್ದಾರೆ.

ಇಂಧನ ಬೆಲೆ ಸ್ಥಿರ: ಸಾರ್ವಜನಿಕರಿಗೆ ಕೊಂಚ ರಿಲೀಫ್‌

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap