ಬೆಂಗಳೂರು:
ವಿಶ್ವಾಸಮತ ಪ್ರಕ್ರಿಯೆ ಇಂದು (ಮಂಗಳವಾರ) ಕೊನೆಯಾಗಲಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿಂದು ವಿಶ್ವಾಸಮತ ಪ್ರಕ್ರಿಯೆ ಮುಗಿಯಲಿದೆ. ಇವತ್ತೇ ಕಡೆ ಎಲ್ಲ ಪ್ರಕ್ರಿಯೆ ಮುಗಿಯಲೇಬೇಕೆಂದು ಅವರು ತಿಳಿಸಿದ್ದಾರೆ.
ಅತೃಪ್ತ ಶಾಸಕರ ಅನರ್ಹತೆ ವಿಚಾರಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅತೃಪ್ತ ಶಾಸಕರು ನನಗೆ ದಾಯಾದಿಗಳಲ್ಲ. ರಾಜೀನಾಮೆ ಹೇಗೆ ನೀಡಬೇಕು. ನೋಟಿಸ್ ಏಕೆ ಕೊಡ್ತೀವಿ ಎನ್ನುವ ಕನಿಷ್ಟ ಜ್ಞಾನ ಇಲ್ಲದವರು ಶಾಸಕರಾಗಿದ್ದಾರೆ. ‘ವಿಚಾರಣೆಗೆ ಬಾರದೇ ಹೋದರೆ ಅವರಿಷ್ಟ. ನಾನು ಏನು ಹೇಳಲಿ? ನನ್ನ ಕರ್ತವ್ಯ ನಾನು ಮಾಡುತ್ತೇನೆ. ಎಂದು ಸ್ಪೀಕರ್ ಗರಂ ಆದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ