ಬಾಗಲಕೋಟೆ : ಅಪಘಾತದಲ್ಲಿ ನುಜ್ಜುಗುಜ್ಜಾದ 5 ವಾಹನಗಳು!!

ಬಾಗಲಕೋಟೆ: 

      ಬೆಳ್ಳಂಬೆಳಗ್ಗೆ ಸರಣಿ ಅಪಘಾತ ಸಂಭವಿಸಿದ್ದು, ಪರಿಣಾಮ ಐದು ವಾಹನಗಳ ಮುಂಭಾಗ ನುಜ್ಜುಗುಜ್ಜಾಗಿರುವ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಕ್ರಾಸ್ ಬಳಿ ನಡೆದಿದೆ. 

    ಮೂರು ಲಾರಿ ಮತ್ತು ಎರಡು ಕ್ಯಾಂಟರ್ ನಡುವೆ ಅಪಘಾತ ನಡೆದಿದೆ. ಮೊದಲಿಗೆ ರಸ್ತೆ ಪಕ್ಕ ನಿಂತಿದ್ದ ಒಂದು ಲಾರಿಗೆ ಮತ್ತೊಂದು ಲಾರಿ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ನಂತರ ಹಿಂದಿನಿಂದ ಬಂದ ಇನ್ನೊಂದು ಲಾರಿ ಕ್ಯಾಂಟರ್‌ಗಳಿಗೆ ಡಿಕ್ಕಿ ಹೊಡೆದಿದೆ.  ಪರಿಣಾಮ ಐದು ವಾಹನಗಳು ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ.

     ಸರಣಿ ಅಪಘಾತದಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಘಟನೆಯಲ್ಲಿ ಓರ್ವ ಲಾರಿ ಚಾಲಕನಿಗೆ ಮಾತ್ರ ಗಾಯವಾಗಿದೆ. ಆತನನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಮೀನಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap