ಬೆಂಗಳೂರು:
ಇಡೀ ದೇಶದಲ್ಲೇ ಪ್ರತಿಷ್ಠಿತ ಸಾರಿಗೆ ಸಂಸ್ಥೆಗಳಲ್ಲಿ ಒಂದಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಟಿಕೆಟ್ ನೀಡಲು ಇರುವ ಪೇಪರ್ ರೋಲ್ ಗಳು ಲಭ್ಯವಿಲ್ಲದೆ ಸಮಸ್ಯೆ ಎದುರಾಗಿದೆ .
ಬೇರೆಲ್ಲೂ ಅಲ್ಲ ದಸರಾ ನಡೆಯುತ್ತಿರುವ ಸಾಂಸ್ಕೃತಿಕ ರಾಜಧಾನಿಯೆಂದೆ ಕರೆಯಲಾಗುವ ಮೈಸೂರು ನಗರ, ವಾಯುವ್ಯ ಸಾರಿಗೆ ಸಂಸ್ಥೆಗಳಲ್ಲಿ ಈ ಸಮಸ್ಯೆ ಎದುರಾಗಿದೆ. ಒಂದು ವೇಳೆ ಇಟಿಎಂ ಕೆಟ್ಟುಹೋದಲ್ಲಿ ಮಾಮೂಲಿ ಪದ್ಧತಿಯಲ್ಲಿ ಟಿಕೆಟ್ ನೀಡಲಾಗುತ್ತಿತ್ತು. ಆದರೆ ಇಟಿಎಂ ಗಳು ಬಂದ ಮೇಲೆ ಬಹುತೇಕ ನಿರ್ವಾಹಕರು ಹಳೆ ಪದ್ದತೆಯನ್ನು ಮರೆತಿರುವುದು ಸಮಸ್ಯೆಗ ಒಂದು ಕಾರಣ ಎಂದೇ ಹೇಳಬಹುದು.
ಇಟಿಎಂ ಪೇಪರ್ ರೋಲ್ ಗಳು ಬೇಡಿಕೆಗೆ ಅನುಗುಣವಾಗಿ ಸರಬರಾಜು ಆಗದಿರುವುದು ಇದಕ್ಕೆ ಕಾರಣವಾಗಿದೆ. ನಿರ್ವಾಹಕರು ಸಮಸ್ಯೆ ಎದುರಿಸುವಂತಾಗಿದೆ. ಯಂತ್ರಕ್ಕೆ ಅಗತ್ಯವಿರುವ ಪೇಪರ್ ಗಳನ್ನು ಬೇಡಿಕೆಗೆ ಅನುಗುಣವಾಗಿ ಖರೀದಿಸಲು ಕ್ರಮ ಕೈಗೊಳ್ಳಬೇಕು, ಈ ಸಮಸ್ಯೆ ಬಗ್ಗೆ ಮೇಲಧಿಕಾರಿಗಳು ಕೂಡಲೇ ಗಮನಹರಿಸಬೇಕು ಎಂದು ನಿರ್ವಾಹಕರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ