ತಿಪಟೂರು :
ತಾಲ್ಲೂಕಿನ ಗೊರಗೊಂಡನಹಳ್ಳಿಯಲ್ಲಿ ಮತಾಂತರ ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಬೈಬಲ್‍ಭೋದನೆ ಮಾಡುತ್ತಿದ್ದಾರೆ ಎಂಬ ಆಧಾರದ ಮೇಲೆ ತಿಪಟೂರು ನಗರ ಪೋಲೀಸ್‍ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಿಪಟೂರು ನಗರಕ್ಕೆ ಹೊಂದಿಕೊಂಡಿರುವ ಗೊರಗೊಂಡನಹಳ್ಳಿಯ ಮನೆಯೊಂದರಲ್ಲಿ ಜನರನ್ನು ಸೇರಿಸಿಕೊಂಡು ಬೈಬಲ್ ಭೋದನೆಮಾಡುತ್ತಿದ್ದ ಕ್ರೈಸ್ತ ಮಿಷನರಿ ಏಜೆಂಟರುಗಳನ್ನು ತಿಪಟೂರು ನಗರಠಾಣೆಆರಕ್ಷಕರು ವಶಕ್ಕೆ ಪಡೆದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ವಾಟ್ಯಾಪ್ ಗ್ರೂಪ್‍ಗಳಲ್ಲಿ ಚರ್ಚೆ :
ಹೆಚ್ಚಾಗಿ ಬಡವರನ್ನೇ ಗುರಿಯಾಗಿಟ್ಟುಕೊಂಡಿರುವ ಕ್ರೈಸ್ತ ಮಿಷನರಿಗಳು ಹಣ, ಕೆಲಸ, ಜಮೀನು, ಮನೆ ಕೊಡಿಸುತ್ತೇವೆ ಮುಂತಾದ ಆಮಿಷವೊಡ್ಡಿ ಒತ್ತಾಯ ಪೂರ್ವಕವಾಗಿ ಮತಾಂತರ ಮಾಡುತ್ತಿರುವುದು ಕಾನೂನು ಬಾಹಿರ ಚಟುವಟಿಕೆಯಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ತನಿಖೆ ನಡೆಸಿ ಕಾನೂನು ರೀತ್ಯಇಂತ ಮತಾಂತರ ಮಾಡುವ ಕಾನೂನು ವಿರೋಧಿ ಕ್ರಿಮಿಗಳಿಗೆ ಸೂಕ್ತ ಶಿಕ್ಷೆಯನ್ನು ನೀಡಬೇಕು ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಾಲ್ಲೂಕಿನ ಕೋಟೆನಾಯಕನಹಳ್ಳಿಯಲ್ಲಿರುವ ಚರ್ಚ್‍ನಲ್ಲಿ ಇಂತಹ ಕೆಲಸ ಅವ್ಯಾಹತವಾಗಿ ನಡೆಯುತ್ತಿದ್ದು ಅಲ್ಲಿನ ಜನರಿಗೆ ಬುದ್ದಿಕಲಿಸಿ ನಂತರಆರಕ್ಷಕರಿಗೆ ತಿಳಿಸಬೇಕು ಎಂದು ಸಹ ಚರ್ಚೆಯಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ