ಬೆಂಗಳೂರು:
ಲೈಂಗಿಕ ಕಿರುಕುಳ ಆರೋಪದ ವಿಚಾರವಾಗಿ ಬಹುಭಾಷಾ ನಟ ಅರ್ಜುನ್‍ಸರ್ಜಾ ಮತ್ತು ಇತರರ ವಿರುದ್ದ ನಟಿ ಶ್ರುತಿಹರಿಹರನ್ ರವರು ತಮ್ಮ ವಕೀಲ ಅನಂತ ನಾಯ್ಕ ಅವರೊಂದಿಗೆ ಬಂದು ಬೆಂಗಳೂರಿನ ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅರ್ಜುನ್‍ಸರ್ಜಾ ಅವರ ವಿರುದ್ದ ಯುಬಿ ಸಿಟಿಗೆ ಊಟಕ್ಕೆಂದು ನನ್ನನ್ನು ಕರೆದರು. ಈ ಹಿನ್ನೆಲೆಯಲ್ಲಿ ನಾನು ಅವರು ಯುಬಿ ಸಿಟಿಯ ಪಬ್‍ವೊಂದರಲ್ಲಿ ಊಟ ಮಾಡಿದೆವು. ಅವರು ನನ್ನ ದೇಹವನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದರು. ನಂತರ ಲೈಂಗಿಕವಾಗಿ ನನ್ನ ಮೇಲೆ ದೌರ್ಜನ್ಯವೆಸಗಿದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ವಿಸ್ಮಯ ಚಿತ್ರೀಕರಣ ನಡೆಸಿದ ಜಾಗ, ಅಂದರೆ ಚೆನ್ನೈ ಅಥವಾ ಹೈದರಾಬಾದ್‌ನಲ್ಲಿ ಕೇಸ್ ದಾಖಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಬಹುಭಾಷಾ ನಟ ಅರ್ಜುನ್ ಸರ್ಜಾ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಟಿ ಶೃತಿ ಹರಿಹರನ್ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಜಾಮೀನು ರಹಿತ ಬಂಧನ ವಾರೆಂಟ್ ಜಾರಿಗೊಳಿಸುವ ಪ್ರಕರಣ ದಾಖಲಿಸಿದ್ದಾರೆ. ಇದೀಗ ಅರ್ಜುನ್ ಸರ್ಜಾ ಅವರು ನಿರೀಕ್ಷಣಾ ಜಾಮೀನು ಪಡೆಯಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.
ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆಗೆ ಶನಿವಾರ ಬೆಳಿಗ್ಗೆ ಆಗಮಿಸಿದ ನಟಿ ಶೃತಿ ಹರಿಹರನ್ ಅವರು ಅರ್ಜುನ್ ಸರ್ಜಾ ವಿರುದ್ದ ಸುಮಾರು 5 ಪುಟಗಳ ದೂರನ್ನು ಸಲ್ಲಿಸಿದ್ದಾರೆ ದೂರು ಆಧರಿಸಿ ಅರ್ಜುನ್ ಸರ್ಜಾ ವಿರುದ್ಧ ಐಪಿಸಿ ಸೆಕ್ಷನ್ 509(ಮಹಿಳೆಗೆ ಅವಮಾನಿಸುವಂತೆ ಮಾತನಾಡುವುದು) 354(ಅತ್ಯಾಚಾರ ಉದ್ದೇಶದಿಂದ ಹಲ್ಲೆ), 354ಎ(ಲೈಂಗಿಕವಾಗಿ ಸಹಕರಿಸಲು ಒತ್ತಾಯ) ಅಡಿ ಪ್ರಕರಣ ದಾಖಲಾಗಿದ್ದು ಅದರಲ್ಲಿ 354 ಜಾಮೀನು ರಹಿತ ಬಂಧನ ವಾರೆಂಟ್ ಜಾರಿಗೊಳಿಸುವ ಪ್ರಕರಣವಾಗಿದೆ.
ಜಾಮೀನು ಅನಿವಾರ್ಯ: ಈ ಪ್ರಕರಣದಲ್ಲಿ ಅರ್ಜುನ್‍ಸರ್ಜಾ ಅವರಿಗೆ ಗರಿಷ್ಠ 3 ವರ್ಷಗಳ ಕಾಲ ಶಿಕ್ಷೆ ವಿಧಿಸಬಹುದಾಗಿದ್ದು ದೂರು ನೀಡಿದ ವಿವರಗಳನ್ನು ಶೃತಿಹರಿಹರನ್ ಅವರು ನ್ಯಾಯಾಧೀಶರ ಮುಂದೆ ವಿಚಾರಣೆಯ ವೇಳೆ ಹೇಳಿಕೆ ನೀಡಿದರೆ ಅರ್ಜುನ್‍ಸರ್ಜಾಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಇಬ್ಬರು ಸಾರ್ವಜನಿಕ ಕ್ಷೇತ್ರದಲ್ಲಿ ಖ್ಯಾತಿ ಪಡೆದಿರುವುದರಿಂದ ಪೊಲೀಸರು ಅರ್ಜುನ್ ಅವರನ್ನು ಬಂಧಿಸುವ ಸಾಧ್ಯತೆಗಳು ಕಡಿಮೆ ಇದೆ.
ಪ್ರಕರಣದಲ್ಲಿ 7 ವರ್ಷಕ್ಕಿಂತ ಕಡಿಮೆ ಶಿಕ್ಷೆ ವಿಧಿಸಲು ಅವಕಾಶವಿರುವುದರಿಂದ ಸುಪ್ರಿಂಕೋರ್ಟ್ ತೀರ್ಪಿನ ಪ್ರಕಾರ ಅರ್ಜುನ್‍ಗೆ ನಿರೀಕ್ಷಣಾ ಜಾಮೀನು ದೊರೆಯುವಲ್ಲಿ ಯಾವುದೇ ಆತಂಕವಿಲ್ಲ ದೂರಿನ ಹಿನ್ನಲೆಯಲ್ಲಿ ಕಾನೂನು ತಜ್ಷರ ಜೊತೆ ಸಮಾಲೋಚನೆ ನಡೆಸಿರುವ ಅರ್ಜುನ್ ನಿರೀಕ್ಷಣಾ ಜಾಮೀನು ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.
ಹೆಬ್ಬಾಳ ಹಾಗೂ ದೇವನಹಳ್ಳಿಯಲ್ಲಿ ಚಿತ್ರೀಕರಣದ ಸಂದರ್ಭದಲ್ಲಿ ತನಗಾದ ಅನ್ಯಾಯವಾದ ದೌರ್ಜನ್ಯದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಯುಬಿ ಸಿಟಿಗೆ ಚಿತ್ರದ ಬಗ್ಗೆ ಮಾತನಾಡಲು ಕರೆದಿದ್ದು, ಊಟಕ್ಕೆ ಕರೆದುಕೊಂಡು ಹೋಗಿದ್ದರು. ಯುಬಿ ಸಿಟಿಯ ಪಬ್‍ವೊಂದರಲ್ಲಿ ಊಟ ಮಾಡಿದ್ದೆವು. ಈ ವೇಳೆ ನನ್ನ ದೇಹ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದರು. ಲೈಂಗಿಕವಾಗಿ ನನ್ನ ಮೇಲೆ ದೌರ್ಜನ್ಯ ಎಸಗಿದ್ದರು. ಲೈಂಗಿಕ ತೃಷೆಗಾಗಿ ರೆಸಾರ್ಟ್ ಗೆ ಕರೆದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರಿನ ವಿವರ: ದೂರಿನಲ್ಲಿ 2015 ನವೆಂಬರ್‍ನಲ್ಲಿ ವಿಸ್ಮಯ ಸಿನೆಮಾ ಚಿತ್ರೀಕರಣ ವೇಳೆ ನಡೆದಿದ್ದ ಘಟನೆಯನ್ನು ಶೃತಿ ಉಲ್ಲೇಖಿಸಿದ್ದಾರೆ. ಹೆಬ್ಬಾಳದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಶೂಟಿಂಗ್ ನಡೆಯುತ್ತಿತ್ತು. ಬೆಳಗ್ಗೆ 7.30- ಸಂಜೆ 6.30ರವರೆಗೆ ಶೂಟಿಂಗ್ ಇತ್ತು. ಸ್ಕ್ರಿಪ್ಟ್‍ನಲ್ಲಿ ರೋಮ್ಯಾಂಟಿಕ್ ಸೀನ್ ಇತ್ತು. ಒಂದು ದೃಶ್ಯದಲ್ಲಿ ಇಬ್ಬರು ತಬ್ಬಿಕೊಳ್ಳಬೇಕಾಗಿತ್ತು. ಸೀನ್ ಆದ ಮೇಲೆ ನಿರ್ದೇಶಕರು ರಿಹರ್ಸಲ್ ಮಾಡಿದ್ದರು.
ಈ ವೇಳೆ ಅರ್ಜುನ್ ಸರ್ಜಾ ಅಸಹ್ಯವಾಗಿ ನನ್ನನ್ನು ನೋಡಿ ಹಿಂಭಾಗದಿಂದ ನನ್ನನ್ನು ಅಪ್ಪಿಕೊಂಡರು. ಇದಕ್ಕೆ ನಾನು ವಿರೋಧಿಸಿದೆ. ಆಗ ನನ್ನ ತೊಡೆ ಹಾಗೂ ಎದೆ ಭಾಗವನ್ನು ಸ್ಪರ್ಶಿಸಿ ತೀವ್ರ ಮುಜುಗರವನ್ನು ಉಂಟು ಮಾಡಿದ್ದರು. ಚಿತ್ರೀಕರಣದ ಕಾರಣದಿಂದ ನಾನು ಇದನ್ನೆಲ್ಲ ತಡೆದುಕೊಂಡೆ. ನಾನು ಇದಕ್ಕೆ ಪ್ರತಿಕ್ರಿಯಿಸುವ ಮೊದಲೇ ಅವರು ನನನ್ನು ಗಟ್ಟಿಯಾಗಿ ಅಪ್ಪಿಕೊಂಡರು. ನನ್ನನ್ನು ತಬ್ಬಿಕೊಂಡು ನನ್ನ ಬೆನ್ನ ಮೇಲೆ ಸವರುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಷ್ಟೆ ಅಲ್ಲದೇ ಅರ್ಜುನ್ ಸರ್ಜಾ ನಿರ್ದೇಶಕರಿಗೆ ಈ ದೃಶ್ಯವನ್ನು ಇನ್ನು ಚೆನ್ನಾಗಿ ಮಾಡಬಹುದೇ ಎಂದು ಕೇಳಿದರು. ಬಳಿಕ ನಾನು ನಿರ್ದೇಶಕರ ಬಳಿ ಹೋಗಿ ಹೀಗೆಲ್ಲಾ ಆದರೆ ನನಗೆ ಕೆಲಸ ಮಾಡಲು ಆಗುವುದಿಲ್ಲ ಎಂದಿದ್ದೆ. ಅರ್ಜುನ್ ಸರ್ಜಾರ ಈ ವರ್ತನೆಯಿಂದ ನನಗೆ ಮುಜುಗರ ಉಂಟಾಗಿ ಕಾರವಾನ್(ಸಿನಿಮಾ ಸೆಟ್ ನಲ್ಲಿ ಮೇಕಪ್ ಮಾಡುವ ವಾಹನ) ನಲ್ಲಿ ಅಳುತ್ತ ಕುಳಿತುಕೊಂಡೆ. ಸಿನಿಮಾದ ರೋಮ್ಯಾಂಟಿಕ್ ದೃಶ್ಯವನ್ನು ಬಳಸಿಕೊಂಡು ನನ್ನ ಕೈ ಹಿಡಿದುಕೊಂಡು ಎಳೆದಾಡಿದ್ದರು.
ಹೆಣ್ಣಿನ ಅಸಹಾಯಕತೆ: ಇನ್ನೊಂದು ದೃಶ್ಯದಲ್ಲಿ ನಾನು ಹಾಸಿಗೆ ಮೇಲೆ ಮಲಗಿರಬೇಕಿತ್ತು. ಈ ದೃಶ್ಯವನ್ನು ದುರುಪಯೋಗಪಡಿಸಿಕೊಂಡು ಕೈ ಎಳೆದು ತಬ್ಬಿಕೊಂಡರು. ಅತ್ಯಂತ ಹತ್ತಿರವಾಗಿ ಬರಲು ನನ್ನನ್ನು ಎಳೆದುಕೊಂಡರು. ಅವರನ್ನು ತಳ್ಳಿ ನಾನು ಹೊರಗೆ ಬಂದೆ. ಹೆಣ್ಣಿನ ಅಸಹಾಯಕತೆಯನ್ನು ದುರುಪಯೋಗ ಮಾಡಿಕೊಂಡಿದ್ದರು. ಈ ವೇಳೆ ನಾನು ಕಿರುಚಿದೆ. ತುಂಬಾ ಅಳುತ್ತಾ ಕುಳಿತುಕೊಂಡಿದ್ದೆ. ಇದರಿಂದ ನನಗೆ ಬೇಸರ ಉಂಟಾಗಿ ಸಹ ನಿರ್ದೇಶಕ ಭರತ್ ನೀಲಕಂಠರ ಗಮನಕ್ಕೆ ತಂದಿದ್ದೆ. ಆಗ ಅವರು ರಿಹರ್ಸಲ್ ಬೇಡ ನೇರವಾಗಿ ಚಿತ್ರೀಕರಣ ಮಾಡುತ್ತೇನೆ ಎಂದು ಅವರು ತಿಳಿಸಿದ್ದರು.
ದೇವನಹಳ್ಳಿ ಆಸ್ಪತ್ರೆಯಲ್ಲಿ ಚಿತ್ರೀಕರಣ ಇತ್ತು. ನನ್ನ ಜೊತೆ ಕೆಟ್ಟದಾಗಿ ಅರ್ಜುನ್ ಸರ್ಜಾ ನಡೆದುಕೊಂಡಿದ್ದರು. ಶೂಟಿಂಗ್ ಸಂದರ್ಭದಲ್ಲಿ ನನ್ನ ಪ್ರೈವೆಟ್ ರೆಸಾರ್ಟ್ ಇದೆ ಅಲ್ಲಿಗೆ ಬಾ ಎಂದು ಕರೆದಿದ್ದರು. ನಾನು ಏನಕ್ಕೆ ಎಂದು ಕೇಳಿದೆ. ಆಗ ಅವರು ನಾನು ಇಂದು ಫುಲ್ ಫ್ರೀ ಇದ್ದು ನನ್ನೊಂದಿಗೆ ಸಮಯ ಕಳೆಯಬೇಕು ಎಂದಿದ್ದರು ಎಂಬುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ