ಮಂಡ್ಯ : ಜೆಡಿಎಸ್ ನಿಂದ 1 ಸೈಟ್, 15 ಲಕ್ಷ ಆಫರ್!!?

ಮಂಡ್ಯ :

      ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೊಸ ಬಾಂಬ್ ಸಿಡಿಸಿದ್ದಾರೆ.

       ಶ್ರೀರಂಪಟ್ಟಣದ ಕಾಳೇನಹಳ್ಳಿಯಲ್ಲಿ ಪ್ರಚಾರ ಮಾಡುವಾಗ ಸುಮಲತಾ ಅವರು, ಈ ಸಂದರ್ಭದಲ್ಲಿ ನಾನು ಈ ವಿಚಾರವನ್ನು ಈಗ ಹೇಳಬೇಕಾ ಅಥವಾ ಮುಂದೆ ಹೇಳಬೇಕಾ ಗೊತ್ತಾಗುತ್ತಿಲ್ಲ. ಜೆಡಿಎಸ್‍ನ ಟಾಪ್ ಲೀಡರ್ ಒಬ್ಬರು ನನ್ನ ಸಂಪರ್ಕ ಮಾಡಿದ್ದರು. ನನ್ನ ಫೋಟೋ ಮಾರ್ಫ್ ಮಾಡಿ ಏನ್ ಬೇಕಾದರೂ ಮಾಡುವುದಕ್ಕೆ ತಯಾರಿ ಮಾಡಿಕೊಂಡಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ಆದರೂ ಜೆಡಿಎಸ್ ಅವರು ನನ್ನ ಖಾಸಗಿ ಜೀವನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಪ್ಲಾನ್ ಮಾಡಿದ್ದಾರೆ.

      ಅಲ್ಲದೇ, ನಮ್ಮ ಸೋಶಿಯಲ್ ಮೀಡಿಯಾದಲ್ಲಿ ಕೆಲಸ ಮಾಡುವ ಇಬ್ಬರು ಹುಡುಗರನ್ನ ಸಂಪರ್ಕ ಮಾಡಿ ನನ್ನ ಬಗ್ಗೆ ಅಪಪ್ರಚಾರ ಮಾಡಬೇಕು ಎಂದು ಹೇಳಿ ಫಾರಿನ್ ಟ್ರಿಪ್ ಗೆ 10 ರಿಂದ 15 ಲಕ್ಷ ರೂ. ಜೊತೆಗೆ ಬೆಂಗಳೂರಿನಲ್ಲಿ ಒಂದು ಸೈಟ್ ಕೊಡ್ತೀವಿ ಎಂದು ಆಫರ್ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

      ಸಾಮಾಜಿಕ ಜಾಲತಾಣಗಳಲ್ಲಿ ನನ್ನನ್ನು ಕೆಟ್ಟ ರೀತಿಯಲ್ಲಿ ಬಿಂಬಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಫೋಟೋ ಮಾರ್ಫ್ ಮಾಡಿರುವ ವೀಡಿಯೊಗಳನ್ನ ನೀವು ನೋಡಿದರೂ ನೋಡಬಹುದು ಎಂದು ಜೆಡಿಎಸ್ ವಿರುದ್ಧ ಆರೋಪಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link