ಬೆಂಗಳೂರು
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಅಧಿಕಾರಿಗಳ ಕಾರ್ಯಾಚರಣೆಯಿಂದಾಗಿ 10 ಜೀವಂತ ಬಾಂಬ್ ಗಳನ್ನು ಪತ್ತೆ ಹಚ್ಚಿ ಬೆಂಗಳೂರು ಸ್ಫೋಟದ ಸಂಚನ್ನು ವಿಫಲಗೊಳಿಸಲಾಗಿದೆ.
ಹೌದು, ಇತ್ತೀಚಿಗೆ ದೊಡ್ಡಬಳ್ಳಾಪುರದಲ್ಲಿ ಮಸೀದಿಯಲ್ಲಿ ಸಿಕ್ಕಿ ಬಿದ್ದಿದ್ದ ಶಂಕಿತ ಜಮಾತ್-ಉಲ್-ಮುಜಾಹಿದೀನ್- ಬಾಂಗ್ಲಾದೇಶ್ (ಜೆಎಂಬಿ) ಸಂಘಟನೆಯ ಉಗ್ರ ಹಬೀಬುರ್ ರೆಹಮಾನ್ ವಾಸವಿದ್ದ ಚಿಕ್ಕಬಾಣಾವರದ ರೈಲು ನಿಲ್ದಾಣದ ಸಮೀಪವಿರುವ ಮನೆಯಲ್ಲಿ ಈ ಬಾಂಬ್‌ಗಳು ಸಿಕ್ಕಿವೆ ಎಂದು ಹೇಳಲಾಗಿದೆ.
ಹಬೀವುಲ್ ಅನ್ನು ಬಂಧಿಸಿದ ವೇಳೆಯಲ್ಲಿ ತಾನು ಚಿಕ್ಕಬಾಣವಾರದಲ್ಲಿ ವಾಸವಿದ್ದ ಮನೆಯಲ್ಲಿ ಬಾಂಬ್ ಇಟ್ಟಿದೆ ಅಂತ ಮಾಹಿತಿ ನೀಡಿದ್ದ ಎನ್ನಲಾಗಿದ್ದು, ತಪಾಸಣೆ ವೇಳೆಯಲ್ಲಿ ಏಳು ಸಜೀವ ಬಾಂಬ್ ಗಳು, ಒಂದು ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಜೀವಂತ ಬುಲೆಟ್‍ಗಳು, ಗ್ರೆನೇಡ್ ಮಾಡುವುದು ಹೇಗೆ ಮತ್ತು ಬಾಂಬ್ ಬ್ಲಾಸ್ಟ್ ಮಾಡುವುದರ ಬಗ್ಗೆ ಪುಸ್ತಕ ಸಿಕ್ಕಿದೆ ಎನ್ನಲಾಗಿದೆ.
ಕೆಲ ದಿವಸಗಳ ಹಿಂದೆ ದೊಡ್ಡಬಳ್ಳಾಪುರದಲ್ಲಿ ಎನ್ಐಎ ತಂಡ ಬಂಧಿತ ಶಂಕಿತ ಉಗ್ರ ಹಬಿಬುರ್ ರೆಹಮಾನ್ ಅನ್ನು ವಿಚಾರಣೆಗೆ ಒಳಪಡಿಸಿದಾಗ ಆತ ರಾಮನಗರದ ಬಳಿ ಬಾಂಬ್ ಇಟ್ಟಿರುವುದಾಗಿ ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ಎನ್ಐಎ, ಗುಪ್ತಚರ ದಳ, ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಾಮನಗರದ ಟಿಪ್ಪು ನಗರದ 23ನೇ ವಾರ್ಡ್ನ ಸೇತುವೆ ಬಳಿ ಎರಡು ಸಜೀವ ಬಾಂಬ್ ಅನ್ನು ಪತ್ತೆ ಹಚ್ಚಿದ್ದರು.
ಇನ್ನು ಕಳೆದ ನಾಲ್ಕುಘಂಟೆಗಳಿಂದ ಎನ್‌ಐಎ ತಂಡ ಹಾಗು ಇತರ ಭದ್ರತಾ ಪಡೆಯ ಮನೆಯನ್ನು ತನ್ನ ವಶಕ್ಕೆ ಪಡೆದುಕೊಂಡಿದ್ದು ಪಿನ್‌ಟುಪಿನ್ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಎನ್ಐಎ ತಂಡದ ಕಾರ್ಯಾಚರಣೆಯಿಂದ ಕಡೆಗೂ ರಾಜ್ಯ ರಾಜಧಾನಿಯಲ್ಲಿ ಭಾರಿ ಅನಾಹುತವೊಂದು ತಪ್ಪಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ