ಚಿಕ್ಕಬಳ್ಳಾಪುರ:
ನೀರಾ (ಸೇಂದಿ) ಸೇವಿಸಿ ಓರ್ವ ಬಾಲಕ ಸೇರಿ 12 ಮಂದಿ ಅಸ್ವಸ್ಥರಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗುಟ್ಟಪಾಳ್ಯ ಗ್ರಾಮದಲ್ಲಿ ನಡೆದಿದೆ.
ಅಸ್ವಸ್ಥರು ಕೂಲಿ ಕೆಲಸಕ್ಕಾಗಿ ಆಂಧ್ರ ಪ್ರದೇಶದ ಸೇರಿದ ಕಮ್ಮವಾರಪಲ್ಲಿಗೆ ರೈತ ಚಂದ್ರ ಎಂಬವರ ತೋಟಕ್ಕೆ ಟೊಮೆಟೋ ಗಿಡಗಳಿಗೆ ತಂತಿ ಕಟ್ಟೋಕೆ ಹೋಗಿದ್ದಾಗ 12 ಮಂದಿ, ರೈತ ಚಂದ್ರಪ್ಪ ತಂದಿದ್ದ ನೀರಾ ಸೇವನೆ ಮಾಡಿದ್ದರು.ನಂತರ ತೀವ್ರವಾದ ಹೊಟ್ಟೆ ನೋವಿನ ಜೊತೆ ಭೇದಿಯಿಂದ ಬಳಲಿ ಅಸ್ವಸ್ಥರಾಗಿದ್ದಾರೆ.
