ದೆಹಲಿ :
ಸಿಆರ್‌ಪಿಎಫ್ ಬೆಟಾಲಿಯನ್‌ನ 122 ಯೋಧರಿಗೆ ಕಳೆದ ಎರಡು ವಾರಗಳಲ್ಲಿ ನಡೆಸಲಾಗಿರುವ ಕೊರೋನ ವೈರಸ್ ಪರೀಕ್ಷೆಯಲ್ಲಿ ಸೋಂಕು ತಗಲಿರುವುದು ದೃಢಪಟ್ಟಿದೆ.
ಪೂರ್ವ ದೆಹಲಿಯಲ್ಲಿರುವ ಸಿಆರ್ ಪಿಎಫ್ ನ ಶಿಬಿರ ಕೇಂದ್ರದಲ್ಲಿ 68 ಮಂದಿ ಯೋಧರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಈ ಮೂಲಕ ಅಲ್ಲಿ ಕೊರೋನಾ ಸೋಂಕಿತ ಸಿಆರ್ ಪಿಎಫ್ ಸಿಬ್ಬಂದಿ ಸಂಖ್ಯೆ 122ಕ್ಕೇರಿದೆ.
ಕಳೆದ ಕೆಲವು ದಿನಗಳಲ್ಲಿ ಬೆಟಾಲಿಯನ್‌ನಲ್ಲಿ ಕೊರೋನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಸ್ಸಾಂನ 55 ವರ್ಷದ ಯೋಧ ಈ ವಾರಾರಂಭದಲ್ಲಿ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.
ಕೆಲವೇ ದಿನಗಳ ಹಿಂದೆ ಘಟಕದ 45 ಯೋಧರಿಗೆ ವೈರಸ್ ತಗಲಿರುವುದು ದೃಢಪಟ್ಟಿತ್ತು. ಏಪ್ರಿಲ್ 17ರಿಂದ ಕೋವಿಡ್ 19 ಸೋಂಕಿನ ರೋಗ ಲಕ್ಷಣ ಕಾಣಿಸಿಕೊಳ್ಳಲು ಆರಂಭಿಸಿದ್ದು, ಏಪ್ರಿಲ್ 21ರಂದು ಪರೀಕ್ಷೆ ನಡೆಸಿದಾಗ ಪಾಸಿಟಿವ್ ಎಂದು ವರದಿ ಬಂದಿತ್ತು. ನಂತರ ಅವರನ್ನು ದಿಲ್ಲಿಯ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏಪ್ರಿಲ್ 24ರಂದು ಮತ್ತೆ 9 ಮಂದಿ ಸಿಆರ್ ಪಿಎಫ್ ಜವಾನರಿಗೆ ಕೋವಿಡ್ 19 ಸೋಂಕು ತಗುಲಿರುವುದು ಪತ್ತೆಯಾಗಿತ್ತು.
ಕೇಂದ್ರ ಗೃಹ ಸಚಿವಾಲಯ ಈ ವಿಚಾರವನ್ನು ಗಮನಕ್ಕೆ ತೆಗೆದುಕೊಂಡಿದ್ದು ಕೊರೋನ ವೈರಸ್ ಹರಡುವುದಕ್ಕೆ ಕಡಿವಾಣ ಹಾಕಲು ಸಾಧ್ಯವಾಗದಿರುವುದಕ್ಕೆ ಕಾರಣವಾದ ಸಂದರ್ಭವನ್ನು ವಿವರಿಸುವಂತೆ ಸಿಆರ್‌ಪಿಎಫ್ ಮುಖ್ಯಸ್ಥರಿಗೆ ತಿಳಿಸಿದೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ