ಬೆಂಗಳೂರು:

ಆಟವಾಡುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕನಿಗೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸೇರಿರುವ ಘಟನೆ ಮತ್ತಿಕೆರೆ ಬಳಿ ನಡೆದಿದೆ.
9 ನೇ ತರಗತಿ ಓದುತ್ತಿರುವ ನಿಖಿಲ್ (14) ಅಸ್ವಸ್ಥ ಬಾಲಕ. ಬೇಸಿಗೆ ರಜೆ ಹಿನ್ನೆಲೆ ಬಾಲಕ ತನ್ನ ಮನೆಯ ಬಳಿ ಕ್ರಿಕೆಟ್ ಆಡುತ್ತಿರುವಾಗ ಕ್ರಿಕೆಟ್ ಬಾಲು(ಚೆಂಡು) ಮನೆಯ ಮಹಡಿಯ ಮೇಲೆ ಹೋಗಿದೆ. ಬಾಲನ್ನು ತರಲು ಹೋದ ಬಾಲಕ ಅಲ್ಲಿಯೇ ಬಿದ್ದಿದ್ದ ಹೈಟೆನ್ಷನ್ ತಂತಿ ತಾಗಿ ಶಾಕ್ ಹೊಡೆದು ಶೇ.40% ದೇಹದ ಭಾಗ ಸುಟ್ಟಿದೆ.
ಸದ್ಯ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಬಾಲಕನಿಗೆ ಪ್ರಥಮ ಚಿಕಿತ್ಸೆ ನೀಡಿ, ಇದೀಗ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಘಟನೆ ನಡೆದ ಸುತ್ತ ಮುತ್ತಲ ಹತ್ತು ಮನೆಗಳ ಮೀಟರ್ ಗಳು ಸುಟ್ಟು ಕರಕಲಾಗಿದ್ದು, ಸುಮಾರು 1 ಗಂಟೆಯಿಂದ ಅಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ.
ಮಲ್ಲೇಶ್ವರಂ ಪ್ರದೇಶದಲ್ಲಿ ಎಲ್ಲೆಂದರಲ್ಲಿ ವಿದ್ಯುತ್ ತಂತಿಗಳು ಬಿದ್ದಿರುವುದರ ಕುರಿತು ಬೆಸ್ಕಾಂ ಹಾಗೂ ಬಿಬಿಎಂಪಿಗೆ ದೂರು ನೀಡಿದ್ದರೂ ಕೂಡ ಇದುವರೆಗೆ ಸರಿ ಮಾಡಿಲ್ಲ ಆ ಕಡೆ ತಲೆಯನ್ನೇ ಹಾಕಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








