ಹುಬ್ಬಳ್ಳಿ:
14 ವರ್ಷದ ಬಾಲಕನಿಗೆ ಚೇಳು ಕಚ್ಚಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕುಷ್ಠಗಿ ತಾಲೂಕಿನ ನವಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಲ್ಲಪ್ಪ ಛಲವಾದಿ(14) ಚೇಳು ಕಡಿತಕ್ಕೊಳಗಾಗಿ ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಗದ ಪರಿಣಾಮ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಬಾಲಕ.
ಜನವರಿ 12 ರಂದು ಬಾಲಕನ ಮನೆಯಲ್ಲಿ ಆತನಿಗೆ ಚೇಳು ಕಚ್ಚಿತ್ತು, ಚೇಳು ಕಚ್ಚಿದೆ ಎಂಬ ಅರಿವು ಬಾಲಕನಿಗೆ ಇರಲಿಲ್ಲ. ಆದರೆ ನೋವು ಹೆಚ್ಚಾದಾಗ ಆತ ಪೋಷಕರಿಗೆ ತಿಳಿಸಿದ್ದ. ನಂತರ ಆತನನ್ನು ತಾವರಗೇರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪರೀಕ್ಷೆ ಮಾಡಿದ ಅಲ್ಲಿನ ವೈದ್ಯರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದ್ದರು.
ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೇ ಬಾಲಕ ಸಾವನ್ನಪ್ಪಿದ್ದಾನೆ. ಎಂದು ವೈದ್ಯರು ತಿಳಿಸಿದ್ದಾರೆ. ಬಾಲಕನಿಗೆ ವಿಷ ನಿರೋಧಿಸುವ ಇಂಜೆಕ್ಷನ್ ನೀಡಿದ್ದರೇ ಬಾಲಕ ಬದುಕುತ್ತಿದ್ದ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ