ಬೆಂಗಳೂರು :
ರಾಜ್ಯದಲ್ಲಿಂದು ಬರೋಬ್ಬರಿ 141 ಮಂದಿಗೆ ಕೋವಿಡ್-19 ಸೋಂಕು ದೃಢವಾಗಿದ್ದು, ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 2922 ಕ್ಕೆ ಏರಿಕೆಯಾಗಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಬೆಂಗಳೂರು -33, ಯಾದಗಿರಿ -18, ದಕ್ಷಿಣ ಕನ್ನಡ -14, ಉಡುಪಿ -13, ಹಾಸನ -13, ಬೀದರ್ -10, ವಿಜಯಪುರ -11, ಶಿವಮೊಗ್ಗ -6, ಹಾವೇರಿ -4, ಕೋಲಾರ -3, ದಾವಣಗೆರೆ -4, ಮೈಸೂರು -2, ಉತ್ತರ ಕನ್ನಡ -2, ಧಾರವಾಡ -2, ಕಲಬುರಗಿ-2, ಬೆಳಗಾವಿ -1, ಚಿತ್ರದುರ್ಗ -1, ತುಮಕೂರು -1, ಬೆಂಗಳೂರು ಗ್ರಾಮೀಣ -1 ಪ್ರಕರಣಗಳು ಪತ್ತೆಯಾಗಿದೆ.
ಸಂಜೆಯ ಪತ್ರಿಕಾ ಪ್ರಕಟಣೆ 30/05/2020@CMofKarnataka @BSYBJP @DVSadanandGowda @SureshAngadi_ @sriramulubjp @drashwathcn @BSBommai @mla_sudhakar @iaspankajpandey @Tejasvi_Surya @BBMP_MAYOR @BBMPCOMM @CCBBangalore @BlrCityPolice @KarnatakaVarthe @PIBBengaluru @KarFireDept pic.twitter.com/qoPHB2DDM6
— K'taka Health Dept (@DHFWKA) May 30, 2020
ಸೋಂಕಿನಿಂದಾಗಿ ಒಟ್ಟು 49 ಜನರು ಸಾವನ್ನಪ್ಪಿದ್ದರೆ, ಆತ್ಮಹತ್ಯೆ ಮಾಡಿಕೊಂಡು ಇಬ್ಬರು ಸೋಂಕಿತರು ನಿಧನವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಒಟ್ಟು 50 ಸೋಂಕಿತರು ಸಾವನ್ನಪ್ಪಿದಂತಾಗಿದೆ.
ಈ ಮೂಲಕ ಕರ್ನಾಟಕದಲ್ಲಿ ಇಂದು 141 ಜನರಿಗೆ ಕೊರೋನಾ ಸೋಂಕು ತಗುಲಿದ್ದು, ಕೊರೊನಾ ಸೋಂಕಿತರ ಸಂಖ್ಯೆ 2922 ಕ್ಕೆ ಏರಿಕೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ