ಬೆಂಗಳೂರು:
ನಾಳೆ ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ನಗರದಾದ್ಯಂತ 144 ಸೆಕ್ಷನ್ ಜಾರಿ ಮಾಡಿಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಹೀಗಾಗಿ ನಗರದಲ್ಲಿ ಎಲ್ಲಿಯೂ ಸಹ ಗುಂಪುಗೂಡುವಂತಿಲ್ಲ. ಯಾವುದೇ ರ್ಯಾಲಿ, ಧರಣಿ ಮಾಡುವಂತಿಲ್ಲ. ಯಾವುದೇ ಸಾರ್ವಜನಿಕ ಸಮಾರಂಭ, ಗ್ರೂಪ್ ಸೆಲೆಬ್ರೇಷನ್ ಮಾಡುವಂತಿಲ್ಲ’ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸ್ಪಷ್ಟಪಡಿಸಿದ್ದಾರೆ.
‘ ರಾಜ್ಯದಲ್ಲಿ 21ನೇ ತಾರೀಕಿನವರೆಗೆ ರಾಜ್ಯದಲ್ಲಿ ಕೋವಿಡ್ ಪ್ರೊಟೋಕಾಲ್ ಜಾರಿಯಲ್ಲಿರುತ್ತೆ. ಹಾಗಾಗಿ ಯಾರಿಗೂ ಪ್ರತಿಭಟನೆಗೆ ಅವಕಾಶವಿಲ್ಲ. ರೂಲ್ಸ್ ಬ್ರೇಕ್ ಮಾಡಿ ರಸ್ತೆಗಿಳಿದ್ರೆ, ಬಂಧಿಸಿ ಠಾಣೆಯಲ್ಲಿ ಕೂರಿಸಿ ಸುಮ್ಮನೆ ಬಿಟ್ಟು ಕಳುಹಿಸುವುದಿಲ್ಲ. ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರತಿ ಬಾರಿಯಂತೆ ಪ್ರತಿಭಟನಾಕಾರರನ್ನ ಬಂಧಿಸಿ ಮುಂದೆ ಹೋಗಿ ಬಿಡಲ್ಲ ಎಂದು ಸ್ಪಷ್ಟ ಪಡಿಸಿದ ಅವ್ರು, ಪ್ರತಿಭಟನೆ ಮಾಡಿದ್ರೆ, ಬಸ್, ಜನರ ಮೇಲೆ ಕಲ್ಲು ತೂರಾಟ ನಡೆಸಿದ್ರೆ ನಾವು ಸುಮ್ಮನಿರಲ್ಲ. ರೆಗ್ಯೂಲರ್ ಐಪಿಸಿ ಸೆಕ್ಷನ್ ಪ್ರಕಾರ ಅರೆಸ್ಟ್ ಮಾಡ್ತೇವೆ. ಯಾವುದೇ ಸಮಸ್ಯೆ ಆಗದಂತೆ ಬಂದೋಬಸ್ತ್ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ