ತುಮಕೂರು:
ಭಾನುವಾರ ಬೆಳಗ್ಗೆ ಇಡ್ಲಿ, ಚಟ್ನಿ ಸೇವಿಸಿ ಸುಮಾರು 19 ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ತಾಲ್ಲೂಕಿನ ಬೀದರ್ ವಿಶ್ವವಿದ್ಯಾನಿಲಯದ ಕೊನೇಹಳ್ಳಿ ಸರ್ಕಾರಿ ಪಶು ವೈದ್ಯಕೀಯ ಡಿಪ್ಲೋಮಾ ಕಾಲೇಜಿನ ವಿದ್ಯಾರ್ಥಿನಿಲಯದಲ್ಲಿ ನಡೆದಿದೆ.
ಮೊನ್ನೆ ತಾನೆ ಚಾಮರಾಜನಗರ ಜಿಲ್ಲೆಯ ಸುಳವಾಡಿ ಗ್ರಾಮದ ಕಿಚ್ಚುಗುತ್ತಿಮಾರಮ್ಮ ದೇವಾಲಯದ ಹಾಗೂ ಜಿಲ್ಲೆಯ ಶಿರಾ ತಾಲ್ಲೂಕಿನ ಯಾದಲಡಕು ಗ್ರಾಮದ ಮಾಸುವ ಮೊದಲೇ ಮತ್ತೆ ಇಂತಹ ಪ್ರಕರಣ ತಾಲ್ಲೂಕಿನಲ್ಲಿ ನಡೆದಿದ್ದು ಸಾರ್ವಜನಿಕರಲ್ಲಿ ಆತಂಕವನ್ನುಂಟುಮಾಡುತ್ತಿದೆ.
ಕೊನೇಹಳ್ಳಿ ಸರ್ಕಾರಿ ಪಶು ವೈದ್ಯಕೀಯ ಡಿಪ್ಲೋಮಾ ಕಾಲೇಜಿಲ್ಲಿ ಒಟ್ಟು 83 ವಿದ್ಯಾರ್ಥಿಗಳಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಬಾಗಲಕೋಟೆ, ಬೀದರ್, ಹುಬ್ಬಳ್ಳಿ, ದೊಡ್ಡಬಳ್ಳಾಪುರದವರಾಗಿದ್ದು ಎಲ್ಲರೂ ವಿದ್ಯಾರ್ಥಿನಿಲಯದಲ್ಲಿರುತ್ತಾರೆ. ಎಂದಿನಂತೆ ಭಾನುವಾರವೂ ಸಹ ಬೆಳಗಿನ ಉಪಹಾರವಾಗಿ ಇಡ್ಲಿ, ಚಟ್ನಿ, ಸಾಂಬರ್ ಸೇವನೆ ಮಾಡಿದ ನಂತರ ಕೆಲವರಿಗೆ ಹೊಟ್ಟೆನೋವು ಮತ್ತು ವಾಂತಿ ಮಾಡುಕೊಂಡಿದ್ದಾರೆ, ಕೆಲವರಿಗೆ ಬೇಧಿ ಶುರುವಾಗಿದೆ.
ಕೆಲವರು ಸುಸ್ತಾದಂತೆ ಆಗಿದ್ದಾರೆ. ಕೂಡಲೆ ವಿಚಾರ ಕಾಲೇಜಿನ ಬಸ್‍ಚಾಲಕನ ಸಮಯಪ್ರಜ್ಞೆಯಿಂದ ವಿದ್ಯಾರ್ಥಿಗಳನ್ನು ತಿಪಟೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ವಿದ್ಯಾರ್ಥಿಗಳು ಆಸ್ಪತ್ರೆಗೆ ಬಂದಾಗ ಇದ್ದ ಡಿ ಗ್ರೂಪ್ ನೌಕರರ ಸಹಾಯದಿಂದ ಒಬ್ಬ ವೈದ್ಯರಾದ ಡಾ|| ಗೋಮತಿ, ಡಾ|| ರವಿಕುಮಾರ್, ಡಾ||ಶಶಿಕುಮಾರ್ ಸೂಕ್ತ ಚಿಕಿತ್ಸೆ ನೀಡಿದ್ದರಿಂದ ಯಾವುದೇ ರೀತಿಯ ಅನಾಹುತವಾಗುವ ಮೊದಲೆ ವಿದ್ಯಾರ್ಥಿಗಳು ಚೇತರಿಸಿಕೊಳ್ಳುತ್ತಿದ್ದಾರೆ.
ಕಾಲೇಜಿನ ಪ್ರಾಂಶುಪಾಲ ರುದ್ರಸ್ವಾಮಿ ಎಂ.ಎಸ್ ಮತ್ತು 2 ಶಿಕ್ಷಕರಿದ್ದು ಅವರಲ್ಲಿ ಒಬ್ಬರು ಉನ್ನತ ವ್ಯಾಸಂಗಕ್ಕಾಗಿ ರಜೆಯ ಮೇಲೆ ತೆರಳಿದ್ದು ವಾರ್ಡ್‍ನ್ ಇರುವುದಿಲ್ಲ. ವಿದ್ಯಾರ್ಥಿಗಳು ಹೇಳುವ ಪ್ರಕಾರ ಪ್ರಾಂಶುಪಾಲರಿಗೆ ವಿಷಯ ತಿಳಿಸಿದ್ದೇವೆ. ಅವರು ತುಮಕೂರಿನಿಂದ ಬರುತ್ತಿದ್ದಾರೆಂದು, ಆದರೆ ಸಂಜೆ 5 ಗಂಟೆಯಾದರು ಕಾಲೇಜಿಗೆ ಸಂಬಂಧಿಸಿದ ಯಾವುದೇ ಅಧಿಕಾರಿಗಳು ಆಸ್ಪತ್ರೆಗೆ ಭೇಟಿನೀಡಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡದಿರುವುದು ವಿಪರ್ಯಾಸ.
ಪ್ರಕರಣದ ಬಗ್ಗೆ ವಿದ್ಯಾರ್ಥಿಗಳನ್ನು ವಿಚಾರಿಸಿದರೆ ನಾವು ಬಡವರು, ಈ ವಿಷಯ ನಮ್ಮ ಮನೆಗೆ ತಿಳಿದರೆ ನಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುತ್ತಾರೆ. ಆದ್ದರಿಂದ ನಾವು ಏನು ಹೇಳುವುದಿಲ್ಲ ಎನ್ನುವ ಮನೋಭಾವ ಅವರಲ್ಲಿ ಎದ್ದುಕಾಣುತ್ತಿತ್ತು.
ಕಾಲೇಜಿಗೆ ಸಿಬ್ಬಂದಿಯನ್ನು ನಿಯೋಜಿಸಿದಿರುವುದು ಮತ್ತು ವಿದ್ಯಾರ್ಥಿಗಳ ಹಿತವನ್ನು ಕಾಯದೆ ಇರುವುದು ಸರ್ಕಾದ ನಿರ್ಲಕ್ಷ್ಯ ಧೋರಣೆಯಾಗಿದೆ ಎಂದು ಸಾರ್ವಜನಿಕರು ದೂಷಿಸಿದರು. ಇರುವ ಒಬ್ಬ ಪ್ರಾಂಶುಪಾಲರೇ ಎಲ್ಲ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯವೇನಾಗುತ್ತದೆ ಎನ್ನುವುದು ಮಾತ್ರ ತಿಳಿಯದಾಗಿದೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಶಾಸಕ ಬಿ.ಸಿ.ನಾಗೇಶ್ ವಿದ್ಯಾರ್ಥಿಗಳ ಯೋಗಕ್ಷೇಮವನ್ನು ವಿಚಾರಿಸಿದರು.
ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇಷ್ಟಾದರೂ ಕಾಲೇಜಿನ ಪ್ರಾಂಶುಪಾಲ ಹಾಗೂ ಪ್ರಬಾರಿ ವಾರ್ಡನ್ ರುದ್ರಸ್ವಾಮಿ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
ಸದ್ಯಕ್ಕೆ ಡಿ.ಗ್ರೂಪ್ ನೌಕರರಿಂದ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನಡೆಯುತ್ತಿದ್ದು, ಕೊನೆಹಳ್ಳಿ ಗ್ರಾಮದಲ್ಲಿನ ಪಶುಸಂಗೋಪನಾ ಪಾಲಿಟೆಕ್ನಿಕ್ ಕಾಲೇಜು ಬೀದರ್ವಿವಿಗೆ ಒಳಪಡುತ್ತದೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ