ಕೇಂದ್ರ ಬಜೆಟ್‌ 2020 : ಬೆಂಗಳೂರಿಗೆ 18,600 ಕೋಟಿ!!

ನವದೆಹಲಿ : 

      ಕೇಂದ್ರ ಸರ್ಕಾರ 2020-21ನೇ ಸಾಲಿನ ಬಜೆಟ್​ ಮಂಡನೆ ಮಾಡುತ್ತಿದ್ದು, ಬಜೆಟ್ ನಲ್ಲಿ ಬೆಂಗಳೂರಿಗೆ ಬಿಗ್‌ ಗಿಫ್ಟ್‌ ನೀಡಲಾಗಿದೆ.

      ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿಗೆ ಮಂಡಿಸುತ್ತಿರುವ ಸಂಪೂರ್ಣ ಬಜೆಟ್​ ಇದಾಗಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಲೋಕಸಭೆಯಲ್ಲಿ ಬಜೆಟ್​ ಮಂಡನೆ ಮಾಡುತ್ತಿದ್ದಾರೆ.

      ಈ ವೇಳೆ ‘ಬೆಂಗಳೂರಿನ ಉಪನಗರ ರೈಲು ಯೋಜನೆಗೆ ಒತ್ತು ನೀಡಲಾಗಿದೆ. ಮೆಟ್ರೊ ಮಾದರಿಯಲ್ಲಿ ರೂ18,600 ಕೋಟಿ ವೆಚ್ಚದಲ್ಲಿ ಬೆಂಗಳೂರಿನ ಉಪನಗರ ರೈಲು ಯೋಜನೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಈ ಪೈಕಿ ಶೇ 20ರಷ್ಟು ಮೊತ್ತ ಕೇಂದ್ರದ ಸಹಾಯಧನವಾಗಿರಲಿದ್ದು, ಶೇ 50ರಷ್ಟು ಹೊರಗಿನ ನೆರವು ಒದಗಿಸಲು ಭರವಸೆ ನೀಡಲಾಗುತ್ತದೆ ಎಂದು ಹೇಳಿದರು.

       ಇದಲ್ಲದೆ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ ವೇ ಆರಂಭವಾಗಲಿದ್ದು, ದೆಹಲಿ-ಮುಂಬೈ ಎಕ್ಸ್‌ಪ್ರೆಸ್ ವೇ 2023ಕ್ಕೆ ಮುಕ್ತಾಯವಾಗಲಿದೆ ಎಂದೂ ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap