ಬೆಂಗಳೂರು :
ರಾಜ್ಯದಲ್ಲಿ ಇಂದು 19 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 692 ಕ್ಕೆ ಏರಿಕೆಯಾಗಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮೂವರಿಗೆ, ಬೆಂಗಳೂರು ನಗರದ ಇಬ್ಬರಿಗೆ, ಕಲಬುರ್ಗಿಯಲ್ಲಿ ಒಬ್ಬರಿಗೆ ಹಾಗೂ ಬಾಗಲಕೋಟೆಯಲ್ಲಿ 13 ಜನರಿಗೆ ಕೊರೋನಾ ಸೋಂಕು ತಗುಲಿದೆ ಎಂದು ತಿಳಿಸಿದೆ.
Covid19: Morning Bulletin 06/05/2020
Total Confirmed Cases: 692
Deceased: 29
Recovered:345
New Cases:19#KarnatakaFightsCorona #IndiaFightsCorona pic.twitter.com/p0PGCMCaKN— B Sriramulu (@sriramulubjp) May 6, 2020
ಈ ಮೂಲಕ ಸೋಂಕಿತರ ಸಂಖ್ಯೆ 692ಕ್ಕೆ ಏರಿಕೆಯಾಗಿದ್ದು, ಒಟ್ಟಾರೆ 692 ಮಂದಿ ಸೋಂಕಿತರ ಪೈಕಿ 345 ಮಂದಿ ಗುಣಮುಖರಾಗಿದ್ದು, 347 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ