ಬಳ್ಳಾರಿ : ಇಬ್ಬರು ಕೊರೊನಾ ಸೋಂಕಿತರು ಗುಣಮುಖರಾಗಿ ಬಿಡುಗಡೆ!!

ಬಳ್ಳಾರಿ:

      ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಇಬ್ಬರು ಗುಣಮುಖರಾಗಿ ಇಂದು ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

       ಜಿಲ್ಲೆಯಲ್ಲಿ ಈ ವರಗೆ 13 ಜನ ಸೋಂಕಿತರಾಗಿದ್ದರು. ಅವರಲ್ಲಿ ಇಂದು ಪಿ- 333 ಮತ್ತು ಪಿ- 337 ಸಂಖ್ಯೆಯ ಸಹೋದರ ಸೋಂಕಿತರು ಗುಣ ಮುಖರಾಗಿ ಬಿಡುಗಡೆಯಾದರು. ಇವರಿಬ್ಬರೂ ಸಹ ಹೊಸಪೇಟೆ ನಗರಕ್ಕೆ ಸೇರಿದವರಾಗಿದ್ದು, ಇವರು ಜಿಲ್ಲೆಯ ಮೊದಲ ಸೋಂಕಿತ ವ್ಯಕ್ತಿಯ ಸಂಪರ್ಕ ಹೊಂದಿದವರಾಗಿದ್ದಾರೆ.

      ಬಿಡುಗಡೆ ಯಾದವರು ಹೊರಗೆ ಬಂದು ತಾವು ಗುಣ ಮುಖರಾಗಿ ಹೊರಗೆ ಬರಲು ವೈದ್ಯರ, ಆರೋಗ್ಯ ಇಲಾಖೆಯ ಸಿಬ್ಬಂದಿಯ ಸಹಕಾರವನ್ನು ಸ್ಮರಿಸಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜನಾರ್ದನ ಮೊದಲಾದವರು ಗುಣಮುಖರಾದವರನ್ನು ಹೂಗುಚ್ಚ ನೀಡಿ ಬೀಳ್ಕೊಟ್ಟಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link