ಲಾರಿ ಮತ್ತು ಟ್ಯಾಂಕರ್ ಅಪಘಾತ : 2 ಸಾವು…!!!

ರಾಯಚೂರು:

       ಮಾನ್ವಿಯ ಕುರ್ಡಿ ಕ್ರಾಸ್ ನಲ್ಲಿ  ಲಾರಿ ಹಾಗೂ ಹಾಲಿನ ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಎರಡೂ ವಾಹನದ ಚಾಲಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವರದಿಯಾಗಿದೆ.

       ಮೃತರನ್ನು ಉತ್ತರ ಪ್ರದೇಶ ಮೂಲದ ಸತ್ಯಜೀತ್ ವರ್ಮ ಹಾಗೂ ಚಳ್ಳಿಗೆರೆಯ ವಿ.ಆರ್. ಬಾಗೋಡಿ ಎಂದು ಗುರುತಿಸಲಾಗಿದ್ದು,ಈ ಘಟನೆಯಲ್ಲಿ  ಮತ್ತಿಬ್ಬರಿಗೆ ಗಂಭೀರವಾಗಿ ಗಾಯಾಗಳಾಗಿವೆಗಾಯಾಳುಗಳನ್ನ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

       ಅಪಘಾತಕ್ಕೆ ಎರಡು ವಾಹನಗಳೂ ವೇಗವಾಗಿ ಬರುತ್ತಿದ್ದುದೇ ಕಾರಣ ಎಂದು ಸ್ಥಳಿಯರು ತಿಳಿಸಿದ್ದಾರೆ. ಈ ವೇಳೆ ಅತೀ ವೇಗದ ಚಾಲನೆಯಲ್ಲಿದ್ದ ವಾಹನಗಳು ಮಾನ್ವಿಯ ಕುರ್ಡಿ ಕ್ರಾಸ್ ಬಳಿ ಡಿಕ್ಕಿಯಾಗಿವೆ. ಪರಿಣಾಮ ಚಾಲಕರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತದಿಂದಾಗಿ ರಾಯಚೂರು-ಮಾನ್ವಿ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದು, ಸಂಚಾರ ಸುಗಮಗೊಳಿಸಲು ಪೊಲೀಸರು ಹರಸಾಹಸ ಪಡುವಂತಾಗಿತ್ತು.

        ಅಪಘಾತದ ರಭಸಕ್ಕೆ ಎರಡೂ ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ಈ ಘಟನೆ ಮಾನವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link