ಚಾಮರಾಜನಗರ :
ವಿದ್ಯುತ್ ಬೇಲಿ ತುಳಿದು ಎರಡು ಆನೆಗಳು ಸಾವನ್ನಪ್ಪಿರುವ ಘಟನೆ ಕರ್ನಾಟಕ-ತಮಿಳುನಾಡು ಗಡಿ ಭಾಗದ ಕರುಳವಾಡಿ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಕರುಳವಾಡಿ ಗ್ರಾಮದ ರೈತ ಕಾಡು ಪ್ರಾಣಿಗಳು ಬರುವುದನ್ನು ತಡೆಯಲು ಜಮೀನಿಗೆ ವಿದ್ಯುತ್ ವೈರ್ ಅನ್ನು ಬೇಲಿಗೆ ಸಂಪರ್ಕಿಸಿ ಹಾಕಿದ್ದರು. ರಾತ್ರಿ ಎರಡು ಆನೆಗಳು ಅಹಾರ ಅರಿಸಿ ಕರುಳವಾಡಿ ಗ್ರಾಮ ಪ್ರವೇಶಿಸಿವೆ. ಈ ವೇಳೆ ಬೇಲಿ ಸ್ಪರ್ಶಿಸುತ್ತಿದ್ದಂತೆಯೇ ಮೃತಪಟ್ಟಿವೆ.
ಮೃತಪಟ್ಟ ಗಳ ವಯಸ್ಸು 20 ವರ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಆನೆಗಳ ಸಾವಿನ ಸುದ್ದಿ ತಿಳಿದ ಬಳಿ ಜಮೀನು ಮಾಲೀಕ ಪಳನಿಸ್ವಾಮಿ ಪರಾರಿಯಾಗಿದ್ದಾನೆ.
ಘಟನಾ ಸ್ಥಳಕ್ಕೆ ತಮಿಳುನಾಡಿನ ಸತ್ಯಮಂಗಲಂ ಜಿಲ್ಲೆಯ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ. ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಬಲೆ ಬೀಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
