ಜಲ ಸಂಪನ್ಮೂಲ ಖಾತೆಗಾಗಿ ಇಬ್ಬರು ನಾಯಕರ ಕಿತ್ತಾಟ!!

ಬೆಂಗಳೂರು : 

       ಒಂದು ಖಾತೆಗಾಗಿ ಇಬ್ಬರು ಪ್ರಬಲ ನಾಯಕರು ಗುದ್ದಾಟ ನಡೆಸುತ್ತಿದ್ದು, ಜಲ ಸಂಪನ್ಮೂಲ ಖಾತೆಯನ್ನು ತಮಗೇ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. 

     ಗೋಕಾಕ್ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ರಮೇಶ್ ಜಾರಕಿಹೊಳಿ ಅವರು ಇದೀಗ ಜಲ ಸಂಪನ್ಮೂಲ ಖಾತೆಯನ್ನು ತಮಗೇ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ, ಮತ್ತೊಂದೆಡೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಜಲಸಂಪನ್ಮೂಲ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.

      ಜಲಸಂಪನ್ಮೂಲ ಇಲಾಖೆ ಪ್ರಮುಖ ಮತ್ತು ದೊಡ್ಡ ಖಾತೆಯಾಗಿದೆ. ಅಂತರ ರಾಜ್ಯ ಸಮಸ್ಯೆ ಬಂದಾಗ ನಿರ್ವಹಿಸುವುದು ಕಷ್ಟವಾಗುತ್ತದೆ. ಶಾಸಕ ರಮೇಶ್ ಹೆಚ್ಚಿನ ಸಮಯ ನೀಡುವುದು ಅನುಮಾನ. ಅವರಿಗೆ ಭಾಷೆಯ ವಿಚಾರದಲ್ಲಿ ತೊಂದರೆಯಾಗುತ್ತದೆ. ಹೀಗಾಗಿ ಅವರಿಗೆ ಜಲಸಂಪನ್ಮೂಲ ಖಾತೆ ಕೊಡಬೇಡಿ ಎಂದು ಮುಖ್ಯಮಂತ್ರಿ ಮೇಲೆ ಕೆಲವು ಸಚಿವರು, ಶಾಸಕರು ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.

      ಈ ಕಾರಣದಿಂದ ಉಪ ಚುನಾವಣೆ ಗೆದ್ದ ಬಳಿಕ ಸಿಎಂ ಯಡಿಯೂರಪ್ಪಗೆ ಹೊಸ ಸಂಕಟ ಶುರುವಾಗಿದ್ದು, ಸಂಪುಟ ವಿಸ್ತರಣೆಯೇ ಸಿಎಂ ಯಡಿಯೂರಪ್ಪಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಅದರಲ್ಲೂ ಆ ಒಂದು ಖಾತೆಗಾಗಿ ಇಬ್ಬರು ಪ್ರಬಲ ನಾಯಕರು ಗುದ್ದಾಟ ನಡೆಸುತ್ತಿದ್ದು, ಇಬ್ಬರನ್ನೂ ಬಿಡೋ ಮನಸ್ಸು ಯಡಿಯೂರಪ್ಪಗೆ ಇಲ್ಲ. ಒಬ್ಬರಿಗೆ ಕೊಟ್ಟರೆ ಇನ್ನೊಬ್ಬರು ಬಂಡಾಯ ಸಾರೋದು ಗ್ಯಾರಂಟಿ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link