ಮೈಸೂರು :
ಪೊಲೀಸ್ ಜೀಪ್ವೊಂದು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಕರ್ತವ್ಯ ನಿರತ ಪೊಲೀಸರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೆ.ಆರ್. ನಗರ ತಾಲ್ಲೂಕಿನ ಹೆಬ್ಬಾಳು ಸಮೀಪ ನಡೆದಿದೆ.
ಕೆ.ಆರ್. ನಗರ ಠಾಣೆಯ ಎಎಸ್‌ಐ ಮೂರ್ತಿ (58) ಹಾಗೂ ಕಾನ್ ಸ್ಟೆಬಲ್ ಶಾಂತಕುಮಾರ್ (45) ಮೃತ ಪೊಲೀಸರು. ಇವರು ರಾತ್ರಿ ಗಸ್ತು ಕಾರ್ಯ ನಡೆಸಿ ಚುಂಚನಕಟ್ಟೆ ಕಡೆಯಿಂದ ಕೆ.ಆರ್. ನಗರದ ಕಡೆಗೆ ಬರುತ್ತಿರುವಾಗ ನಸುಕಿನ 3 ಗಂಟೆ ಸಮಯದಲ್ಲಿ ಸಿದ್ದನಕೊಪ್ಪಲು ಗೇಟ್ ಸಮೀಪ ಜೀಪ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
