ತುಮಕೂರು : ಮಾಸ್ಕ್ ಇಲ್ಲದಿದ್ದರೆ 200 ರೂ. ದಂಡ!!

ತುಮಕೂರು :

      ಕೊರೊನಾ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಸರ್ಕಾರದ ನಿರ್ದೇಶನದ ಅನುಸಾರ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಬ್ಬರೂ ಮಾಸ್ಕ್ (ಮುಖಕ್ಕೆ ನಿಗದಿತ ಮಾಸ್ಕ್ ಅಥವಾ ಕರವಸ್ತ್ರ ಅಥವಾ ಯಾವುದೇ ವಸ್ತ್ರ) ಧರಿಸಬೇಕಾದುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ಸರ್ಕಾರದ ನಿಯಮದಂತೆ 200 ರೂ. ದಂಡ ವಿಧಿಸಲಾಗುತ್ತಿದೆ ಎಂದು ತುಮಕೂರು ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ. ನಾಗೇಶ್ ಕುಮಾರ್ ತಿಳಿಸಿದ್ದಾರೆ.

      ನಗರದಲ್ಲಿ ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸಲೆಂದೇ ಮಹಾನಗರ ಪಾಲಿಕೆಯಿಂದ ಅಧಿಕಾರಿ-ನೌಕರರ ವಿಶೇಷ ತಂಡ (ಸ್ಕ್ವಾಡ್)ಗಳನ್ನು ರಚಿಸಲಾಗಿದೆ. ಈ ತಂಡಗಳು ನಗರಾದ್ಯಂತ ಸಂಚರಿಸುತ್ತವೆ. ಪಾದಚಾರಿಗಳಿರಲಿ ಅಥವಾ ವಾಹನ ಸವಾರರು/ಚಾಲಕರಿರಲಿ ಅಂಥವರಿಗೆ ಮಾಸ್ಕ್ ಧರಿಸಿರದಿದ್ದರೆ 200 ರೂ. ದಂಡ ವಿಧಿಸಲಾಗುತ್ತದೆ ಎಂದು ಹೇಳಿದ್ದಾರೆ.

      ಮಾಸ್ಕ್ (ಮಾಸ್ಕ್ ಅಥವಾ ಕರವಸ್ತ್ರ ಅಥವಾ ಯಾವುದೇ ವಸ್ತ್ರದಿಂದ ಮುಖ ಮುಚ್ಚಿರದಿದ್ದರೆ) ಧರಿಸದಿದ್ದರೆ 100 ರೂ. ದಂಡ ವಿಧಿಸುವ ವಿನೂತನ ನಿಯಮವನ್ನು ದೇಶದಲ್ಲೇ ಮೊದಲ ಬಾರಿಗೆ ತುಮಕೂರು ಮಹಾನಗರ ಪಾಲಿಕೆಯು ಜಾರಿಗೆ ತಂದಿತೆಂಬ ಹೆಗ್ಗಳಿಕೆ ಹೊಂದಿದೆ. ತುಮಕೂರು ಪಾಲಿಕೆಯ ಈ ನಿಯಮ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದು, ಇತರೆ ಸ್ಥಳೀಯ ಸಂಸ್ಥೆಗಳೂ ಪಾಲಿಸತೊಡಗಿದವು. ಮಾಸ್ಕ್ ಧರಿಸದಿದ್ದರೆ ಮೊದಲ ಬಾರಿಗೆ 100 ರೂ. ಹಾಗೂ ಎರಡನೇ ಮತ್ತು ನಂತರದ ತಪ್ಪಿಗೆ 200 ರೂ. ದಂಡ ವಿಧಿಸಲು ಪಾಲಿಕೆ ನಿಯಮ ರೂಪಿಸಿತ್ತು. ಈ ಮಧ್ಯೆ ಮೇ 2 ರಂದು ರಾಜ್ಯ ಸರ್ಕಾರ ಹೊಸ ನಿರ್ದೇಶನ ಹೊರಡಿಸಿದ್ದು, ಅದರಲ್ಲಿ ಮಾಸ್ಕ್ ಇಲ್ಲದಿದ್ದರೆ ಮುನಿಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ 200 ರೂ. ದಂಡ ವಿಧಿಸಲು ಸೂಚಿಸಿದೆಯೆಂಬುದನ್ನು ಇಲ್ಲಿ ಗಮನಿಸಬಹುದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap