ಬೆಂಗಳೂರು:
ಮಹಿಳೆ ಸೇರಿ 6 ಮಂದಿಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು 23 ಲಕ್ಷ ರೂ. ವೌಲ್ಯದ 43 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಇಂದಿರಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಂಧ್ರ ಪ್ರದೇಶದವರಾದ ಸವಾರ ಕವಿತಾ(23), ಕಿಲ್ಲೊ ಧನುರಾಜೈ (25), ಪಂಗೈ ಮತ್ಯರಾಜು (26) ಮತ್ತು ಮೈಕೋ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉಪ್ಪಲಪಟ್ಟಿ ಸುಬ್ಬಾರೆಡ್ಡಿ (42), ಬೆಂಗಳೂರಿನ ಅಶೋಕ ನಗರದ ಗೌರವ್(22) ಹಾಗೂ ಬನ್ನೇರುಘಟ್ಟ ರಸ್ತೆಯ ಮಹಮದ್ ಅಮ್ಮರ್ ಶಂಷಾದ್ (25) ಬಂಧಿತ ಆರೋಪಿಗಳು.
ಆರೋಪಿಗಳು ವಿಶಾಖಪಟ್ಟಣದಿಂದ ಬಸ್ಸಿನಲ್ಲಿ ಅಕ್ರಮವಾಗಿ ಗಾಂಜಾವನ್ನು ನಗರಕ್ಕೆ ತಂದು ಇಂದಿರಾ ನಗರ ಮತ್ತು ಮೈಕೊ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಸಿಸಿಬಿ ಪೊಲೀಸ್ ಅಧಿಕಾರಿಗಳು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ