ಪ್ರೇಮವಿವಾಹ : ಯುವಕನ 250 ಅಡಿಕೆ ಮರಗಳ ಕಡಿದ ಯುವತಿ ಪೋಷಕರು!!?

ತುಮಕೂರು :

      ಪೋಷಕರ ವಿರೋಧದ ನಡುವೆ ಪ್ರೀತಿಸಿ ಮದುವೆಯಾದ ಹಿನ್ನೆಲೆ ಹುಡುಗನ ಮನೆಯವರ ಅಡಿಕೆ ಗಿಡಗಳನ್ನು ಹುಡುಗಿ ಮನೆಯವರು ಕಡಿದು ಹಾಕಿರುವ ಆರೋಪ ಪ್ರಕರಣ ತಾಲೂಕಿನ ಮಲ್ಲಸಂದ್ರಪಾಳ್ಯದಲ್ಲಿ ನಡೆದಿದೆ.

     ಪ್ರೀತಿಸಿ ಮದುವೆಯಾಗಲು ಹೊರಟಿದ್ದ ಮಲ್ಲಸಂದ್ರ ಪಾಳ್ಯದ ಅನು ಮತ್ತು ರವಿಚಂದ್ರನ್ ಅವರನ್ನು ಅನು ಕುಟುಂಬಸ್ಥರು ವಿರೋಧಿಸುತ್ತಲೇ ಬಂದಿದ್ದರು.

     ಇತ್ತೀಚಿಗೆ  ಪೋಷಕರ ವಿರೋಧದ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದರಿಂದ ಆಕ್ರೋಶಗೊಂಡ ಅನು ತಾಯಿ ಗಂಗಮ್ಮ ಮತ್ತು ದೊಡ್ಡಮ್ಮನ ಮಗ ಸಂತೋಷ್, ರವಿಚಂದ್ರ ಅವರಿಗೆ ಸೇರಿದ ಅಡಿಕೆ ಗಿಡಗಳನ್ನು ನಾಶ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

     ಆದರೆ, ಈ ಆರೋಪವನ್ನು ಯುವತಿಯ ತಾಯಿ ವಿರೋಧಿಸಿದ್ದಾರೆ. ಮರಗಳನ್ನು ನಾವು ಕಡಿದಿಲ್ಲ, ಯುವಕನ ಕಡೆಯವರೇ ಈ ಕೃತ್ಯ ಎಸಗಿ ನಮ್ಮ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ