ಬೆಂಗಳೂರು:
ನಮ್ಮ ಮೆಟ್ರೋದ 28 ಮಂದಿ ಲೋಕೋ ಪೈಲಟ್ಗಳು ಹಾಗೂ ಸ್ಟೇಷನ್ ಕಂಟ್ರೋಲರ್ಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಸೆಪ್ಟೆಂಬರ್ 7 ರಂದು ಮೆಟ್ರೋ ಪುನರಾರಂಭವಾದ ನಂತರ ಲೊಕೊ ಪೈಲಟ್ಗಳು ಮತ್ತು ಸ್ಟೇಷನ್ ಕಂಟ್ರೋಲರ್ಗಳು ಸೇರಿದಂತೆ ಒಟ್ಟು 28 ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಪ್ರತಿ ನಿತ್ಯವೂ ಲೋಕೋಪೈಲಟ್ಗಳ ಪರೀಕ್ಷೆ ಮಾಡಿಸುತ್ತಿದ್ದು, 6 ನಿಲ್ದಾಣಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸೋಂಕು ತಗುಲಿದೆ.
ಕೋವಿಡ್-19 ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದರೂ ತನ್ನದೇ ಸಿಬ್ಬಂದಿಗಳನ್ನು ಮಹಾಮಾರಿಯಿಂದ ಕಾಪಾಡಿಕೊಳ್ಳಲು ಸಾಧ್ಯವಾಗಿಲ್ಲ.
ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೆ ನಮ್ಮ ಮೆಟ್ರೋ ಸಂಚರಿಸಲಿದ್ದು, 450 ಲೋಕೋ ಪೈಲಟ್ಗಳು ಹಾಗೂ ಸ್ಟೇಷನ್ ಕಂಟ್ರೋಲರ್ಗಳು ಕೆಲಸ ನಿರ್ವಹಿಸುತ್ತಾರೆ. ಕೆಲಸಕ್ಕೆ ಬರುವ ಮುನ್ನ ಥರ್ಮಲ್ ಸ್ಕ್ರೀನಿಂಗ್ ಹಾಗೂ ಟೆಂಪರೇಚರ್ ಚೆಕ್ ಮಾಡಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
