ಚಿಕ್ಕಬಳ್ಳಾಪುರ: ದಾಖಲೆ ಇಲ್ಲದ 2.15 ಲಕ್ಷ ಹಣ ವಶ!!!

ಚಿಕ್ಕಬಳ್ಳಾಪುರ:

     ದಾಖಲೆ ಇಲ್ಲದೇ ಸಾಗಿಸುತ್ತಿದ್ದ 2.15 ಲಕ್ಷ ರೂ, ನಗದನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. 

     ನಗರದ ಹೊರ ವಲಯದ ಕಣಿವೆ ನರಸಾಪುರದ ಬಳಿ ಸುಲ್ತಾನಪೇಟೆಯಲ್ಲಿ ನಿರ್ಮಿಸಲಾಗಿರುವ ಚೆಕ್ ಪೋಸ್ಟ್ ನಲ್ಲಿ ವಾಹನಗಳ ತಪಾಸಣೆ ವೇಳೆ ದಾಖಲೆ ಇಲ್ಲದೇ ಬೆಂಗಳೂರಿನ ಯಲಹಂಕ ನಿವಾಸಿ ನದೀಮ್ ಎಂಬುವರು ಕಾರಿನಲ್ಲಿ ಇಟ್ಟಿದ್ದ 2.15 ಲಕ್ಷ ರೂಗಳನ್ನು ಚುನಾವಣಾ ಅಧಿಕಾರಿಗಳ ತಂಡ ವಶಪಡಿಸಿಕೊಂಡಿದೆ.

     ಈ ಬಗ್ಗೆ ನಂದಿ ಗಿರಿಧಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆಯೆಂದು ಠಾಣೆ ಪಿಎಸ್ಐ ಪಾಟೀಲ್ ತಿಳಿಸಿದ್ದಾರೆ.

     ಜಿಲ್ಲೆಯ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಚುನಾವಣಾ ಅಕ್ರಮಗಳನ್ನು ತಡೆಯಲು ಜಿಲ್ಲಾಡಳಿತ 10 ಚೆಕ್ ಪೋಸ್ಟ್ ಗಳನ್ನು ತೆರೆದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ