ಜೂನ್ 11 ರಿಂದ 20ರ ತನಕ ಪರೀಕ್ಷೆಗಳು ನಡೆಯಲಿವೆ. ಜೂನ್ 11ರಂದು ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30ರವರೆಗೆ ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ, ಗಣಿತ ವಿಷಯದ ಪರೀಕ್ಷೆ ನಡೆಯಲಿವೆ. ಮಧ್ಯಾಹ್ನ 2.30 ರಿಂದ ಗೃಹ ವಿಜ್ಞಾನದ ಪರೀಕ್ಷೆ ನಡೆಯಲಿದೆ. ಜೂನ್ 12ಕ್ಕೆ -ಇಂಗ್ಲಿಷ್, ಜೂನ್ 13ಕ್ಕೆ -ಅರ್ಥಶಾಸ್ತ್ರ, ಭೌತಶಾಸ್ತ್ರ, ಜೂನ್ 14- ಐಶ್ಚಿಕ ಕನ್ನಡ, ಎಲೆಕ್ಟ್ರಾನಿಕ್ಸ್ , ಕಂಪ್ಯೂಟರ್ ಸೈನ್ಸ್, ಜೂನ್ 15 -ಕನ್ನಡ, ಜೂನ್ 17ಕ್ಕೆ ಬಿಸಿನೆಸ್ ಸ್ಟಡೀಸ್,ರಾಸಾಯನಿಕ ಶಾಸ್ತ್ರ,ಎಜುಕೇಶನ್, ಜೂನ್ 19ಕ್ಕೆ ರಾಜ್ಯಶಾಸ್ತ್ರ , ಗಣಿತ, ಜೂನ್ 20ಕ್ಕೆ ಹಿಂದಿ ಪರೀಕ್ಷೆ ನಡೆಯಲಿವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.