‘ಪುರೋಹಿತರನ್ನು’ ಮದುವೆಯಾಗೋ ವಧುವಿಗೆ 3 ಲಕ್ಷ ರೂ. ಬಾಂಡ್!!

ಬೆಂಗಳೂರು :

     ಅರ್ಚಕರು ಮತ್ತು ಪುರೋಹಿತರನ್ನು ಮದುವೆಯಾಗಲು ಬಯಸುವ ವಧುವಿಗೆ ‘ಮೈತ್ರಿ’ ಯೋಜನೆಯಡಿ ರಾಜ್ಯ ಸರ್ಕಾರದಿಂದ 3 ಲಕ್ಷ ಬಾಂಡ್‌ ಸಿಗಲಿದೆ.

      ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಯೋಜನೆಗೆ ಚಾಲನೆ ನೀಡಿದ್ದು, ಈ ಬಗ್ಗೆ ಮಾಧ್ಯಮಗಳಿಗೆ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್‌.ಎಚ್‌. ಸಚ್ಚಿದಾನಂದ ಮಾಹಿತಿ ನೀಡಿದ್ದಾರೆ.

     ಇತ್ತೀಚೆಗೆ ಅರ್ಚಕರು ಮತ್ತು ಪೌರೋಹಿತ್ಯ ಮಾಡುವವರನ್ನು ಮದುವೆಯಾಗಲು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ವಧುವನ್ನು ಪ್ರೋತ್ಸಾಹಿಸಲು ಯೋಜನೆ ರೂಪಿಸಲಾಗಿದೆ. 3 ವರ್ಷಗಳ ನಂತರ ಫಲಾನುಭವಿಗಳು ಬಾಂಡ್ ಹಣ ಪಡೆಯಬಹುದಾಗಿದೆ ಎಂದು ಅವರು ಹೇಳಿದ್ದಾರೆ.

      ಇದಲ್ಲದೇ ಬಡ ಹೆಣ್ಣುಮಕ್ಕಳ ಮದುವೆಗೆ 25 ಸಾವಿರ ರೂ., 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವವರಿಗೆ ಬೋರ್‌ವೆಲ್‌, ಟ್ರ್ಯಾಕ್ಟರ್‌ ಖರೀದಿ ಮತ್ತು ಹೈನುಗಾರಿಕೆಗೆ ಧನ ಸಹಾಯ ನೀಡಲಾಗುತ್ತದೆ ಎಂದು ಸಹಾ ತಿಳಿಸಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap