ಕೊರೊನಾ ಭೀತಿಯಲ್ಲಿರುವ ಜನತೆಗೆ ವಿದ್ಯುತ್ ಬಿಲ್ ಕಟ್ಟಲು 3 ತಿಂಗಳ ವಿನಾಯ್ತಿ!!

ಬೆಂಗಳೂರು :

      ಕೊರೊನಾ ಸೋಂಕು ಹರಡದಂತೆ ದೇಶಾದ್ಯಂತ ಲಾಕ್ ಡೌನ್ ಮಾಡಲಾಗಿದ್ದು, 3 ತಿಂಗಳ ವಿದ್ಯುತ್ ಬಿಲ್ ಗೆ ವಿನಾಯ್ತಿಯನ್ನು ನೀಡುವಂತೆ ಕೇಂದ್ರ ವಿದ್ಯುತ್ ಆಯೋಗ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

     ಹೌದು… ನೀವು ಮೂರು ತಿಂಗಳು ವಿದ್ಯುತ್ ಬಿಲ್ ಕಟ್ಟದೇ ಇದ್ದರೂ ವಿನಾಯ್ತಿ ಸಿಗಲಿದೆ. ಜೊತೆಗೆ ಯಾವುದೇ ಬಡ್ಡಿಯನ್ನು ಸಹ ವಿಧಿಸೋದಿಲ್ಲ. ಈಗಾಗಲೇ ಇಎಂಐ ಸೇರಿದಂತೆ ಎಲ್ಲದಕ್ಕೂ ವಿನಾಯ್ತಿ ನೀಡಲಾಗಿದೆ. ಇದೇ ಮಾದರಿಯಲ್ಲಿ 3 ತಿಂಗಳ ವಿದ್ಯುತ್ ಬಿಲ್ ಗೆ ವಿನಾಯ್ತಿಯನ್ನು ನೀಡುವಂತೆ ಕೇಂದ್ರ ವಿದ್ಯುತ್ ಆಯೋಗ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

     ಈ ಹಿನ್ನಲೆಯಲ್ಲಿ ವಿದ್ಯುತ್ ಬಿಲ್ ಮೂರು ತಿಂಗಳು ಕಟ್ಟದೇ ಇದ್ದರೂ ಸರಬರಾಜು ಕಟ್ ಆಗೋದಿಲ್ಲ. ಯಾವುದೇ ಬಡ್ಡಿಯನ್ನು ಸಹ ವಿಧಿಸೋದಿಲ್ಲ. ಈ ಮೂಲಕ ಲಾಕ್ ಡೌನ್ ಸಂದರ್ಭದಲ್ಲಿ ದೇಶದ ಜನರಿಗೆ ಸಿಹಿಸುದ್ಧಿಯನ್ನು ಕೇಂದ್ರ ಸರ್ಕಾರ ನೀಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link