ಮೈಸೂರು:

ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ, 16 ವರ್ಷದ ಬಾಲಕಿಯ ಮೇಲೆ ಮೂವರು ಪಾದ್ರಿಗಳು ಅತ್ಯಾಚಾರವೆಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೈಸೂರಿನ ಪಾದ್ರಿಯೊಬ್ಬ, ಬಾಲಕಿಯ ತಾಯಿಗೆ ನಿಮ್ಮ ಪುತ್ರಿಗೆ ಸರಕಾರಿ ಕೆಲಸ ಕೊಡಿಸುವುದಾಗಿ ಹೇಳಿ ನಂಬಿಸಿದ್ದಲ್ಲದೆ, ಒಂದು ಲಕ್ಷ ರು. ಹಣ ಮನೆಕಟ್ಟಲು ನೆರವು ನೀಡುವುದಾಗಿ ಹೇಳಿ ಆಮಿಷವೊಡ್ಡಿದ್ದಾರೆ. ಇದಕ್ಕೆ ಒಪ್ಪಿದ ತಾಯಿ ತಮ್ಮ ಪುತ್ರಿಯನ್ನು ಪಾದ್ರಿಯೊಂದಿಗೆ ಕಳುಹಿಸಿದ್ದಾರೆ.

ನಂತರ ಬಾಲಕಿಯನ್ನು ಮಂಗಳೂರಿಗೆ ಕರೆದೊಯ್ದ, ಅಲ್ಲಿ ಮತ್ತಿಬ್ಬರು ಪಾದ್ರಿಗಳೊಂದಿಗೆ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ತಿಳಿದ ಬಾಲಕಿಯ ತಾಯಿ ಸ್ವಯಂ ಸೇವಾ ಸಂಸ್ಥೆಯ ನೆರವಿನೊಂದಿಗೆ ಪಾದ್ರಿಯ ವಿರುದ್ಧ ಹೈಕೋರ್ಟ್‌ನದಲ್ಲಿ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಪಾದ್ರಿ ಸೇರಿ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಹೈಕೋರ್ಟ್ ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದೆ.
ಈ ಸಂಬಂಧ ಮೈಸೂರಿನ ಪಾದ್ರಿ ಸೇರಿ ಮಂಗಳೂರಿನ ಇಬ್ಬರು ಪಾದ್ರಿಗಳ ವಿರುದ್ಧ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








