ನವದೆಹಲಿ :
ಕೇಂದ್ರ ಸರ್ಕಾರ ಕೊರೊನಾ ಸೋಂಕು ಕುರಿತಾದ ಝೋನ್ ಗಳ ಪರಿಷ್ಕೃತ ಪಟ್ಟಿಯನ್ನು ಪ್ರಕಟಿಸಿದ್ದು, ರಾಜ್ಯದ 3 ರೆಡ್ ಝೋನ್, 13 ಆರೆಂಜ್, 14 ಗ್ರೀನ್ ಝೋನ್ ಗಳಾಗಿ ವಿಂಗಡಿಸಲಾಗಿದೆ.
ದೇಶದಲ್ಲಿ ಮಾರಕ ಕೊರೊನಾ ಸೋಂಕು ತಲ್ಲಣ ಸೃಷ್ಟಿಸಿದ್ದು, ದಿನೇ ದಿನೇ ಸೋಂಕು ಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಏತನ್ಮಧ್ಯೆ, ದೇಶದಲ್ಲಿ ಸೋಂಕಿತರ ಸಂಖ್ಯೆ, 35,043ಕ್ಕೆ ಏರಿಕೆಯಾಗಿದೆ. ಇನ್ನು ಮೇ. 3ರ ಬಳಿಕವೂ ದೇಶದಲ್ಲಿ ಲಾಕ್ ಡೌನ್ ವಿಸ್ತರಿಸುವ ಸಾಧ್ಯತೆ ಇದೆ. ಈ ನಡುವೆಯೇ ಕೇಂದ್ರ ಸರ್ಕಾರ ಕೊರೊನಾ ಸೋಂಕು ಕುರಿತಾದ ಝೋನ್ ಗಳ ಪರಿಷ್ಕೃತ ಪಟ್ಟಿಯನ್ನು ಪ್ರಕಟಿಸಿದೆ. ಈ ಪೈಕಿ ದೇಶದ 130 ಜಿಲ್ಲೆಗಳನ್ನು ರೆಡ್ ಝೋನ್, 284 ಆರೆಂಜ್ ಝೋನ್, 319 ಗ್ರೀನ್ ಝೋನ್ ಗಳೆಂದು ಘೋಷಿಸಲಾಗಿದೆ.
Union Health Secry Preeti Sudan writes to Chief Secys of all states/UTs, designating dists across all states/UTs as Red, Orange & Green Zones.
Since recovery rates have gone up, distritcs are now being designated across various zones duly broad-basing the criteria: Preeti Sudan pic.twitter.com/WjVZPJXl5q
— ANI (@ANI) May 1, 2020
ಕೇಂದ್ರ ಸರ್ಕಾರ ಇಂದು ಪ್ರಕಟಿಸಿರುವ ಪರಿಷ್ಕೃತ ಪಟ್ಟಿಯಲ್ಲಿ ದೇಶದ 130 ಜಿಲ್ಲೆಗಳು ರೆಡ್ ಝೋನ್ ನಲ್ಲಿದ್ದು, ಈ ಪೈಕಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 19 ಜಿಲ್ಲೆಗಳು ರೆಡ್ ಝೋನ್ ಪಟ್ಟಿಯಲ್ಲಿವೆ.
ಇನ್ನು ಮಹಾರಾಷ್ಟ್ರದಲ್ಲಿ 14, ತಮಿಳುನಾಡಿನಲ್ಲಿ 12, ದೆಹಲಿಯಲ್ಲಿ 11 ಹಾಗೂ ಕರ್ನಾಟಕದಲ್ಲಿ 3 ಜಿಲ್ಲೆಗಳು ರೆಡ್ ಝೋನ್ ನಲ್ಲಿವೆ. ಇನ್ನು ಕರ್ನಾಟಕದಲ್ಲಿ ಕಿತ್ತಲೆ ವಲಯ 13 , ಹಸಿರು ವಲಯ 14 ಎಂದು ಪರಿಷ್ಕೃತ ಪಟ್ಟಿಯಲ್ಲಿ ತಿಳಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ