ಮಂಡ್ಯ : ಆಟೋಗೆ – ಲಾರಿ ಡಿಕ್ಕಿ ; ಮೂವರು ಯುವಕರ ದುರ್ಮರಣ!!

ಮಂಡ್ಯ: 

     ಪ್ಯಾಸೆಂಜರ್ ಆಟೋಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ಮೃತಪಟ್ಟಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ದುಂಡನಹಳ್ಳಿ ಬಳಿ ನಡೆದಿದೆ.

      ಅಭಿ(20) ಮಲ್ಲನಕುಪ್ಪೆ ಕೃಷ್ಣ(23) ಹಾಗೂ ತಿಟ್ಟಮಾರನಹಳ್ಳಿ ಗ್ರಾಮದ ಪ್ರಶಾಂತ್(21) ಸಾವನ್ನಪ್ಪಿದ ದುರ್ದೈವಿಗಳು. ಈ ಮೂವರು ಸಹ ಸ್ನೇಹಿತರು ಎಂದು ಹೇಳಲಾಗುತ್ತಿದೆ.

      ತುಮಕೂರು – ಮದ್ದೂರು ಹೆದ್ದಾರಿಯಲ್ಲಿ ಮದ್ದೂರಿಂದ ಹೋಗುತ್ತಿದ್ದ ಪ್ಯಾಸೆಂಜರ್ ಆಟೋಗೆ ಲಾರಿ ಹಿಂದಿನಿಂದ ಡಿಕ್ಕಿಹೊಡೆದು ಘಟನೆ ನಡೆದಿದ್ದು, ಯುವಕರು ದುಂಡನಹಳ್ಳಿಯಿಂದ ಅವರದ್ದೇ ಆಟೋದಲ್ಲಿ ಮದ್ದೂರು ಭಾಗಕ್ಕೆ ಹೋಗುತ್ತಿದ್ದರು. ಈ ವೇಳೆ ಮದ್ದೂರಿನಿಂದ ಕುಣಿಗಲ್ ಕಡೆಗೆ ಹೋಗುತ್ತಿದ್ದ ಲಾರಿ ಆಟೋಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆಟೋ ಮೂರು ಪಲ್ಟಿ ಹೊಡೆದಿದೆ. ಆಟೋ ಪಲ್ಟಿಯಾದ ಪರಿಣಾಮ ಆಟೋದಲ್ಲಿದ್ದ ಮೂವರು ಸ್ನೇಹಿತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

      ಅಪಘಾತವಾದ ನಂತರ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಸಂಬಂಧ  ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link