ಚಿತ್ರದುರ್ಗ : ಬೆಂಕಿ ತಗುಲಿ 300 ಕುರಿಗಳ ಮಾರಣಹೋಮ!!

ಚಿತ್ರದುರ್ಗ: 

      ಆಕಸ್ಮಿಕ ಬೆಂಕಿ ತಗುಲಿ ಗುಡ್ಡದಲ್ಲಿ ಮೇಯುತ್ತಿದ್ದ 300 ಕುರಿಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಹೊರಕೇರೆದೇವಪುರದ ಬಳಿ ನಡೆದಿದೆ.

     ಹೊಸದುರ್ಗ ತಾಲ್ಲೂಕಿನ ಅಮೃತಾಪುರ ಗ್ರಾಮದ ತಿಮ್ಮಪ್ಪ ಎಂಬುವರಿಗೆ ಈ ಕುರಿಗಳು ಸೇರಿವೆ. ಈ ಕುರಿಗಳನ್ನು ಮೇಯಿಸಲು ಹೊರಕೆರೆದೇವರಪುರ ಅರಣ್ಯಕ್ಕೆ ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ಗಿಡಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹರಡಿ, ಅಲ್ಲೇ ಮೇಯುತ್ತಿದ್ದ ಕುರಿಗಳಿಗೂ ತಾಗಿದೆ. 300 ಕುರಿಗಳು ಬೆಂಕಿಯಲ್ಲಿ ಸಂಪೂರ್ಣ ಸುಟ್ಟು ಕರಕಲಾಗಿವೆ. ಉಳಿದ 700 ಕುರಿಗಳು ಪ್ರಾಣಾಪಾಯದಿಂದ ಪಾರಾಗಿವೆ.

      ಈ ಪ್ರಕರಣ ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದೂ, ಸ್ಥಳಕ್ಕೆ ಪಶು ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link