
ಗುಪ್ತಚರ ಇಲಾಖೆ ಐಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಬಿ. ದಯಾನಂದ್ ಅವರನ್ನು ಎಡಿಜಿಪಿ ಅಮರ್ ಕುಮಾರ್ ಪಾಂಡೆ ಜಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಕೇಂದ್ರ ವಲಯ ಐಜಿಪಿಯಾಗಿ ಶರತ್ ಚಂದ್ರ ಅವರನ್ನು ವರ್ಗಾವಣೆ ಮಾಡಲಾಗಿದೆ. ಮೈಸೂರು ಕಮೀಷನರ್ ಡಾ.ಎ. ಸುಬ್ರಹ್ಮಣ್ಯೇಶ್ವರ ರಾವ್, ಗುಪ್ತಚರ ಇಲಾಖೆ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಅವರನ್ನು ಮಾನವ ಹಕ್ಕುಗಳ ಆಯೋಗಕ್ಕೆ ವರ್ಗಾವಣೆ ಮಾಡಲಾಗಿದೆ.
ದಕ್ಷಿಣ ವಲಯ ಐಜಿಪಿಯಾಗಿ ವಿಪುಲ್ ಕುಮಾರ್, ಬಳ್ಳಾರಿ ವಲಯ ಐಜಿಪಿಯಾಗಿ ನಂಜುಂಡಸ್ವಾಮಿ, ದಾವಣಗೆರೆ ವಲಯ ಐಜಿಪಿಯಾಗಿ ಅಮೃತ್ ಪೌಲ್, ಕೇಂದ್ರ ಕಾರಾಗೃಹ ಇಲಾಖೆ ಐಜಿಪಿಯಾಗಿ ಎಚ್.ಎಸ್. ರೇವಣ್ಣ, ಮಂಗಳೂರು ಕಮೀಷನರ್ ಆಗಿ ಡಿಐಜಿ ಸಂದೀಪ್ ಪಾಟೀಲ್, ಬೆಂಗಳೂರು ಸಿಎಆರ್ ಜಂಟಿ ಆಯುಕ್ತರಾಗಿ ಟಿ.ಆರ್. ಸುರೇಶ್, ಬೆಂಗಳೂರು ಉತ್ತರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋರ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಇನ್ನು, ಚಿಕ್ಕಬಳ್ಳಾಪುರ ಎಸ್ಪಿಯಾಗಿ ಕೆ. ಸಂತೋಷ್ ಬಾಬು, ಎಎನ್ಎಫ್ ಎಸ್ ಪಿಯಾಗಿ ವಿಕಾಸ್ ಕುಮಾರ್, ಕೆಎಸ್ಆರ್ಟಿಸಿ ಭದ್ರತೆ ಮತ್ತು ಇಂಟೆಲಿಜೆನ್ಸ್ ಡೈರೆಕ್ಟರ್ ಆಗಿ ಪಿ. ಹರ್ಷ ಅವರನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ.
