ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 315 ರಿಂದ 353ಕ್ಕೆ ಏರಿಕೆ!!!

ಬೆಂಗಳೂರು: 

     ರಾಜ್ಯದಲ್ಲಿ ಇಂದು 38 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 353ಕ್ಕೇ ಏರಿಕೆಯಾಗಿದೆ.

      ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು,  ಇಂದು ಹೊಸದಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 38 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಹೀಗಾಗಿ ಸೋಂಕಿತರ ಸಂಖ್ಯೆ 353ಕ್ಕೆ ಏರಿಕೆಯಾಗಿದೆ. ಇದುವರೆಗೆ 82 ಮಂದಿ ಬಿಡುಗಡೆ ಹೊಂದಿದ್ದಿ, ಇಲ್ಲಿಯವರೆಗೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 13ಕ್ಕೆ ಸ್ಥಿರವಾಗಿದೆ ಎಂದು ತಿಳಿಸಿದೆ.

 ಹೊಸದಾಗಿ ಸೋಂಕು ಪತ್ತೆಯಾದವರ ವಿವರ :

      ಬೆಂಗಳೂರು ನಗರ 9, ಮೈಸೂರು ಜಿಲ್ಲೆಯ ನಂಜನಗೂಡು 10, ಮಂಡ್ಯ ಜಿಲ್ಲೆಯ ಮಳವಳ್ಳಿ 3, ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ 1, ಬೀದರ್‌ 1, ವಿಜಯಪುರ 2, ಬಳ್ಳಾರಿ ಜಿಲ್ಲೆಯ ಹೊಸಪೇಟೆ 7, ಚಿಕ್ಕಬಳ್ಳಾಪುರ 3, ಮೈಸೂರು 2.

      ಕರ್ನಾಟಕ ಕೊರೊನಾ ಪ್ರಕರಣಗಳಲ್ಲಿ ಒಂದಷ್ಟು ನಿಯಂತ್ರಣ ಹೊಂದಿತ್ತು. ಆದರೆ, ಇದೀಗ ಒಂದೇ ದಿನ 38 ಸೋಂಕಿತರು ಪತ್ತೆಯಾಗಿದ್ದು, ಆತಂಕ ಹೆಚ್ಚಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ